ಚಿತ್ರದುರ್ಗ: ನಾಯಿ ವಿಚಾರಕ್ಕೆ ಗಲಾಟೆ ಆರಂಭವಾದ ಗಲಾಟೆ ಯುವಕನೊರ್ವನ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಜಾಲಿಕಟ್ಟೆ ಗ್ರಾಮದ 23 ವರ್ಷದ ಮಹಾಂತೇಶ್ ಕೊಲೆಯಾದ ದುರ್ದೈವಿಯಾಗಿದ್ದು, ಯುವಕನ ತಲೆಗೆ ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ.
ಮೃತ ಮಹಾಂತೇಶ್ ಪಕ್ಕದ ಮನೆಯ ಸ್ವಾಮಿ ಎರಡು ಶ್ವಾನಗಳನ್ನು ಸಾಕಿದ್ದರು. ಈ ನಾಯಿಗಳು ಮನೆ ಮುಂದೆ ಗಲೀಜು ಮಾಡುತ್ತೆ ಅಂತ ಮಹಾಂತೇಶ್ ಮನೆಯವರು ಗಲಾಟೆ ಆರಂಭಿಸಿದ್ದರು ಎನ್ನಲಾಗಿದೆ. ಈ ನಡುವೆ ಎರಡು ಕುಟುಂಬಗಳ ನಡುವೆ ಜಗಳ ಆಗಿದ್ದು, ಸ್ವಾಮಿ ಕುಟುಂಬಸ್ಥರು ಮಹಾಂತೇಶ್ ಮೇಲೆ ಬಡಿಗೆಯಿಂದ ಹಲ್ಲೆ ಮಾಡಿದ್ದರಂತೆ. ಘಟನೆ ಸಂಬಂಧ ಮೃತ ಯುವಕನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸ್ವಾಮಿ ಹಾಗೂ ಆತನ ಪತ್ನಿ ಕಮಲಮ್ಮರನ್ನು ಪ್ರಕರಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಕುರಿತಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post