ಪ್ಯಾರಾಸೈಲಿಂಗ್ನಲ್ಲಿ ಎಂಜಾಯ್ ಮಾಡ್ತಿದ್ದಾಗ ಹಗ್ಗ ತುಂಡಾಗಿ ಬಿದ್ದ ಪರಿಣಾಮ ದಂಪತಿ ಸಮುದ್ರಕ್ಕೆ ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಗುಜರಾತ್ ಮೂಲದ ದಂಪತಿ ವೀಕೆಂಡ್ ಕಳೆಯಲು ದಿಯುಗೆ ಬಂದಿತ್ತು. ದಿಯುನಲ್ಲಿರುವ ನಗೋವಾ ಬೀಚ್ನಲ್ಲಿ ಪ್ಯಾರಾಸೈಲಿಂಗ್ನಲ್ಲಿ ಹಾರಾಟ ಮಾಡಲು ನಿರ್ಧರಿಸಿದೆ. ಅದರಂತೆ ಗಾಳಿಯಲ್ಲಿ ಮೇಲೆ ಹೋಗುತ್ತಿದ್ದಾಗ ಹಗ್ಗ ಕಟ್ಟಾಗಿ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ.
ಆದರೆ ದಂಪತಿ ಲೈಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ದಂಪತಿಗೆ ಮಗ ಕೂಡ ಇದ್ದ. ಆದರೆ ಆತ ಪ್ಯಾರಾಸೈಲಿಂಗ್ ಏರಿರಲಿಲ್ಲ ಎಂದು ತಿಳಿದುಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಪ್ಯಾರಾಸೈಲಿಂಗ್ ಕಂಪನಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
@VisitDiu @DiuTourismUT @DiuDistrict @VisitDNHandDD
Parasailing Accident,
Safety measures in India,
and they said very rudely that this is not our responsibility. Such things happens. Their response was absolutely pathetic.#safety #diu #fun #diutourism #accident pic.twitter.com/doN4vRNdO8— Rahul Dharecha (@RahulDharecha) November 14, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post