ಬೆಂಗಳೂರು: ನಿಷೇಧಿತ ಐಸಿಸ್ ಉಗ್ರ ಸಂಘಟನೆಯ ಮತ್ತೊಬ್ಬ ಶಂಕಿತ ಬಂಧನನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರು ನಿವಾಸಿಯಾಗಿದ್ದ ಜೋಹೈಬ್ ಹಮೀದ್ ಶಕೀಲ್ ಮನ್ನಾ (32) ಬಂಧನಕ್ಕೊಳಗಾದ ಶಂಕಿತ ಉಗ್ರನಾಗಿದ್ದು, ಎನ್ಐಎ ಅಧಿಕಾರಿಗಳು 2020ರಿಂದಲೂ ಶಂಕಿತ ಉಗ್ರನಿಗಾಗಿ ಶೋಧ ನಡೆಸುತ್ತಿದ್ದರು. ಆದರೆ ಹಲವು ತಿಂಗಳುಗಳಿಂದ ಆರೋಪಿ ತಲೆಮರೆಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತ ನಿಷೇಧಿತ ಉಗ್ರಸಂಘಟನೆಗಳಾದ ಐಸಿಸ್ , ಐಎಸ್ಐಎಲ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಮುಸ್ಲಿಂ ಯುವಕರನ್ನ ಸೆಳೆದು ಐಸಿಸ್ ಸಂಘಟನೆಗೆ ಕಳುಹಿಸುತ್ತಿದ್ದನಂತೆ. ಇದಕ್ಕಾಗಿ ಕುರಾನ್ ಸರ್ಕಲ್ ಅನ್ನೋ ಗ್ರೂಪ್ ಮೂಲಕ ಯುವಕರನ್ನ ಕಾಂಟ್ಯಾಕ್ಟ್ ಮಾಡ್ತಿದ್ದನಂತೆ. ಈ ಮೂಲಕ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರಚೋದನೆ ನೀಡ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಸಿರಿಯಾದ ಮುಸ್ಲಿಂ ಜನಾಂಗದವರ ಮೇಲೆ ನಡೆಯುತ್ತಿರೋ ಹಿಂಸಾಚಾರದ ದೃಶ್ಯಗಳನ್ನ ತೋರಿಸುತ್ತಿದ್ದ ಈತ ಯುವಕರ ಬ್ರೈಮ್ ವಾಶ್ ಮಾಡಿ, ಅವರನ್ನು ಟರ್ಕಿ ಮೂಲಕ ಸಿರಿಯಾ ದೇಶಕ್ಕೆ ಕಳಿಸ್ತಿದ್ದ ಎನ್ನಲಾಗಿದೆ. ಸದ್ಯ ಶಂಕಿತ ಉಗ್ರ ಜೋಹೈಬ್ ಮನ್ನಾನನ್ನ ಬಂಧಿಸಿರೋ ಎನ್ಐಎ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post