ತಾಯಿ ಅಗಲಿಕೆಯ ನೋವಿನಲ್ಲಿದ್ದ ದುನಿಯಾ ವಿಜಯ್ಗೆ ಮತ್ತೊಂದು ದೊಡ್ಡ ಆಘಾತ ಆಗಿದೆ. ಇಂದು ಅವರ ತಂದೆ ರುದ್ರಪ್ಪ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 81 ವರ್ಷಗಳಾಗಿತ್ತು, ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: ಸ್ಯಾಂಡಲ್ವುಡ್ ನಟ ದುನಿ ವಿಜಯ್ಗೆ ಪಿತೃ ವಿಯೋಗ
ರುದ್ರಪ್ಪ ನಿಧನ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಸಿನಿಮಾ ಬಂಧುಗಳು ಹಾಗೂ ಸ್ನೇಹಿತರು ದುನಿಯಾ ವಿಜಿಯನ್ನ ಭೇಟಿ ಮಾಡಿ, ದೂರವಾಣಿ ಕರೆ ಮಾಡಿ ಸಾಂತ್ವನ ಹೇಳ್ತಿದ್ದಾರೆ. ಹೆತ್ತವರನ್ನ ಅತಿಯಾಗಿ ಪ್ರೀತಿಸುತ್ತಿದ್ದ ದುನಿಯಾ ವಿಜಿಗೆ ಈ ದುಃಖವನ್ನ ಅರಗಿಸಿಕೊಳ್ಳಲು ತುಂಬಾನೆ ಕಷ್ಟ ಪಡುತ್ತಿದ್ದಾರೆ.
ಇದನ್ನೂ ಓದಿ: ಕೊನೆಗಾಲದಲ್ಲಿ ಮಗುವಿನಂತೆ ತಾಯಿ ಸೇವೆ ಮಾಡಿದ್ದರು ದುನಿಯಾ ವಿಜಯ್
ಯಾಕಂದ್ರೆ 4 ತಿಂಗಳ ಹಿಂದಷ್ಟೇ ವಿಜಿ ಅವರ ಅಮ್ಮ ನಾರಾಯಣಮ್ಮ ತೀರಿಕೊಂಡಿದ್ದರು. ಅವರೂ ಕೂಡ ವಯೋ ಸಹಜ ಕಾಯಿಲೆಯಿಂದ ಬಳಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಇದೀಗ ಅಂದರೆ ಕೇವಲ 132 ದಿನಗಳ ಅಂತರದಲ್ಲಿ ಅವರ ಅಪ್ಪ ನಿಧನರಾಗಿದ್ದಾರೆ. ಹೀಗಾಗಿ ವಿಜಿ ಕುಟುಂಬಕ್ಕೆ ದೊಡ್ಡ ಶಾಕ್ ಆಗಿದೆ.
ತಂದೆ-ತಾಯಿಯನ್ನ ಅತಿಯಾಗಿ ಹಚ್ಚಿಕೊಂಡಿದ್ದ ವಿಜಿ, ಅನಾರೋಗ್ಯಕ್ಕೆ ಒಳಗಾಗಿದ್ದ ಹಿರಿಯನ್ನ ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಿದ್ದರು. ವೈದ್ಯರನ್ನ ನೇರವಾಗಿ ಮನೆಗೆ ಕರೆಸಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಅಲ್ಲದೇ ಹೆತ್ತವರ ಆರೈಕೆಯನ್ನ ಖುದ್ದು ದುನಿಯಾ ವಿಜಿ ಅವರೇ ನೋಡಿಕೊಳ್ಳುತ್ತಿದ್ದರು.
ಇದನ್ನೂ ಓದಿ: ರೀಲ್ನಲ್ಲಿ ಆಗದ್ದನ್ನ ರಿಯಲ್ ಲೈಫ್ನಲ್ಲಿ ಮಾಡಿದ ದುನಿಯಾ ವಿಜಯ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post