ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳಿಗ್ಗೆ ಹೊಯ್ಸಳ ಗಸ್ತು ಸಿಬ್ಬಂದಿ ಮಹಿಳೆಯೊಬ್ಬರಿಂದ ಹಣ ವಸೂಲಿ ಮಾಡುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡ ಘಟನೆ ನಗರದ ಮಾರತ್ ಹಳ್ಳಿ ಫ್ಲೈಓವರ್ ಬಳಿ ನಡೆದಿದೆ.
ಪಾನ್ ಶಾಪ್ ಅಂಗಡಿಯ ಬಳಿ ಹೊಯ್ಸಳ ಕಾರು ಬಂದು ನಿಲ್ಲುತ್ತಿದ್ದಂತೆ ಅಂಗಡಿಯ ಮಹಿಳೆ ಬಂದು ಜೀಪ್ ನಲ್ಲಿ ಕುಳಿತಿದ್ದ ಹೆಡ್ ಕಾನ್ಸ್ಟೇಬಲ್ ಗುರುಮೂರ್ತಿಗೆ ಹಣ ನೀಡಿದ್ದಾರೆ. ಯಾವ ಅಂಜಿಕೆಯೂ ಇಲ್ಲದೆ ಹಣ ಪಡೆದ ಪೇದೆ ಸೀದಾ ಹಣವನ್ನ ಜೇಬಿಗಿಳಿಸಿದ್ದಾರೆ. ಇನ್ನು ಅಂಗಡಿಗೆ ಬಂದಿದ್ದ ಯುವಕ ಇದನ್ನು ತಮ್ಮ ಮೊಬೈಲ್ನಲ್ಲಿ ಚಿತ್ರಿಕರಿಸಿಕೊಂಡಿದ್ದಾರೆ.
ಹಣ ಪಡೆದು ಹೊಯ್ಸಳ ಸಿಬ್ಬಂದಿ ಹೊರಡುತ್ತಿದ್ದಂತೆ ಪೊಲೀಸ್ ಜೀಪ್ ನಿಲ್ಲಿಸಿದ ಯುವಕ ಮಹಿಳೆಯಿಂದ ನೀವು ಹಣ ಏಕೆ ಪಡೆದೀರಿ ಎಂದು ಪ್ರಶ್ನೆ ಹಾಕಿದ್ದಾರೆ. ಯುವಕನ ಪ್ರಶ್ನೆಗೆ ಅಂಜಿದ ಕಾನ್ಸ್ಟೇಬಲ್ ಸೈಲೆಂಟ್ ಆಗಿದ್ದಾರೆ. ಬಳಿಕ ಮಹಿಳೆಯನ್ನ ವಾಪಸ್ ಕರೆಯಿಸಿ ಹಣವನ್ನು ಮರಳಿಸುವಂತೆ ಕೇಳಿದಾಗ ಸುಮ್ಮನೆ ಹಣ ನೀಡಿದ ಪೇದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಸದ್ಯ ಹೊಯ್ಸಳ ಸಿಬ್ಬಂದಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇನ್ನು ವಿಷಯ ತಿಳಿದ ಮಾರತ್ಹಳ್ಳಿ ಇನ್ಸ್ಪೆಕ್ಟರ್ ವೈಟ್ಫೀಲ್ಡ್ ಡಿಸಿಪಿಗೆ ಹೆಡ್ಕಾನ್ಸ್ಟೇಬಲ್ ಗುರುಮೂರ್ತಿ ಮತ್ತು ಚಾಲಕ ಸುರೇಂದ್ರ ವಿರುದ್ಧ ಕರ್ತವ್ಯ ಲೋಪದಡಿಯಲ್ಲಿ ರಿಪೋರ್ಟ್ ಸಲ್ಲಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post