ಬೆಂಗಳೂರು: ಆರೋಪಿ ಶ್ರೀಕಿಯ ಅಕ್ರಮದ ಬಗ್ಗೆ ಜಗತ್ತಿಗೆ ತೋರಿಸಿದ್ದು ಮುಖ್ಯಮಂತ್ರಿಗಳ ಕಾರ್ಯದಕ್ಷತೆ. ವಿದ್ವತ್ ಮೇಲಿನ ನಲಪಾಡ್ ಹಲ್ಲೆ ಕೇಸ್ ಮುಚ್ಚಿಹಾಕಿದಂತೆ ಈ ಕೇಸ್ ಮುಚ್ಚಿ ಹಾಕಿರುತ್ತಿದ್ದರೆ ಹೇಗೆ ಗೊತ್ತಾಗುತ್ತಿತ್ತು? ಆದರೆ ಅಪರಾಧಿ ಬಗ್ಗೆ ಪ್ರಿಯಾಂಕ್ ಖರ್ಗೆ ಬಾಲಿಶ ಹೇಳಿಕೆ ಕೊಟ್ಟಿದ್ದಾರೆ ಎಂದು ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಶಾಸಕ ಪಿ. ರಾಜೀವ್, 2018ರ ಜನವರಿ 18 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗುತ್ತದೆ. ಶ್ರೀಕಿಯನ್ನು ಅಂದು ಬಂಧನ ಮಾಡಿದ್ದರೇ ಅಪರಾಧವನ್ನ ತಡೆಯಬಹುದಿತ್ತು. ಇದು ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ವೈಫಲ್ಯ. ಚಾರ್ಜ್ ಶೀಟ್ ತಯಾರಿಸಿ ಅಬ್ ಸ್ಕ್ಯಾಂಡ್ ಅಂತಾ ತೋರಿಸುತ್ತಾರೆ. ಪೊಲೀಸರಿಗೆ ತೋರಿಸದೇ ಚಾರ್ಟರ್ಡ್ ಫ್ಲೈಟ್‌ನಲ್ಲಿ ಓಡಾಡಿಸೋ ಪ್ರಮೇಯ ಏನಿತ್ತು? ಈಗ ಶ್ರೀಕಿಗೆ ನ್ಯಾಯಾಲಯ ಷರತ್ತಿನ ಜಾಮೀನು ಕೊಡುತ್ತದೆ. ಜಾಮೀನು ತಗೊಂಡು ಬಂದ ಬಳಿಕ ಪೊಲೀಸರ ಮುಂದೆ ಸೆರೆಂಡರ್ ಆಗಬೇಕು, ಕರೆದಾಗ ತನಿಖಾ ಸಂಸ್ಥೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ನಮ್ಮ ಪೊಲೀಸರ ಶ್ರಮ ಮೆಚ್ಚಬೇಕು..
ಆದರೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಶ್ರೀಕಿ ಇದ್ದದ್ದು ಕೇವಲ 20 ನಿಮಿಷ ಮಾತ್ರ.. ಅಂದು ಆತನ ಸ್ವಇಚ್ಚಾ ಹೇಳಿಕೆ ಪಡೆದಿರುತ್ತಿದ್ದರೆ ಅವನ ದಾಖಲೆ ಸಿಗುತ್ತಿತ್ತು. ಹೈಡ್ರೋ ಗಾಂಜಾ ತನಿಖೆ ಆದಾಗ ಕೆಲವರ ಹೆಸರು ಬರುತ್ತದೆ. ಅಂದು ಗೃಹಸಚಿವ ಆಗಿದ್ದ ಬೊಮ್ಮಾಯಿ ಡ್ರಗ್ಸ್ ಜಾಲದ ವಿರುದ್ಧ ಸಮರ ಸಾರಿದಾಗ ರಾಜಕಾರಣಿಗಳ ಮಕ್ಕಳು ಸಿಲುಕುತ್ತಾರೆ. ಅಗರ್ಭ ಶ್ರೀಮಂತರು, ನಟ, ನಟಿಯರ ಬಂಧನ ಆಗುತ್ತದೆ. ವಿದೇಶದಿಂದಲೂ ಆಗಮಿಸಿದ ಪೊಲೀಸರು ಇಲ್ಲೆಲ್ಲಾ ತನಿಖೆ ನಡೆಸುತ್ತಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮಾದಕ ವಸ್ತುಗಳನ್ನು ಸೀಜ್ ಮಾಡಲಾಗುತ್ತದೆ. ಅಂದು ಮೂವರನ್ನ ಬಂಧಿಸಿ ಸುಮ್ಮನಾಗಿದ್ದಿದ್ರೆ ಇಂದು ಶ್ರೀಕಿ ಅಕ್ರಮ ಕಂಡುಬರುತ್ತಿರಲಿಲ್ಲ. ಬಸವರಾಜ್ ಬೊಮ್ಮಾಯಿ ಅವರ ದಕ್ಷತೆ ಇಲ್ಲಿ ಕಂಡು ಬರುತ್ತದೆ. ಶ್ರೀಕಿಯನ್ನು ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ನಡೆಸಿದಾಗ ಹ್ಯಾಕ್ ವಿಚಾರ ಹೊರಗೆ ಬರುತ್ತದೆ. ಇದಕ್ಕೆ ನಮ್ಮ ಪೊಲೀಸರ ಶ್ರಮ ಮೆಚ್ಚಬೇಕು.
ಪ್ರಿಯಾಂಕ್ ಖರ್ಗೆ ಬಿಟ್ ಕಾಯಿನ್ ವಿಚಾರದಲ್ಲಿ ದೊಡ್ಡ ಹಾಸ್ಯ ನಟನ ರೀತಿ ಆಗಿದ್ದಾರೆ. ಕಾನೂನಿನ ಕನಿಷ್ಠ ಜ್ಞಾನ ಇರುವಂತವರು ಅವರ ರೀತಿ ಪ್ರಶ್ನೆ ಕೇಳಲ್ಲ. ಪ್ರಿಯಾಂಕ್ ಖರ್ಗೆಗೆ ಚಾರ್ಜ್ ಶೀಟ್‌ನ 93ನೇ ಪುಟದಲ್ಲಿನ ಅಂಶ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕ್ರಿಪ್ಟೋ ಕರೆನ್ಸಿ ಪೊಲೀಸ್ ಇಲಾಖೆಗೆ ವರ್ಗಾವಣೆ ಆಗುತ್ತದೆ. ಖಾತೆಯಲ್ಲಿ ಹಣ ಇಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ನೀವು ಯಾವುದಾದ್ರೂ ಪಾಪುಗೆ ಅಥವಾ ಪಪ್ಪುಗೆ ನೂರು ರೂಪಾಯಿಗೆ ಕೊಟ್ಟಾಗ ಆ ಮಗು ಚಾಕ್ಲೆಟ್ ತಗೊಂಡರೆ, ಅದು ಚಾಕ್ಲೆಟ್ ಆಗಿರುತ್ತದೆ ಹೊರತು ಹಣ ಆಗಿರೋದಿಲ್ಲ. ಹಾಗೆಯೇ ಪೊಲೀಸ್ ಅಕೌಂಟಿಗೆ ಹೋದ ಹಣ, ಅವನ ಅಕೌಂಟ್‌ನಲ್ಲಿ ಝೀರೋ ಆಗಿರುತ್ತದೆ ಎಂದರು.
ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು..
ಸಿದ್ದರಾಮಯ್ಯ ಖಾಲಿ ಬುಟ್ಟಿ ಹೆಗಲ ಮೇಲೆ ಹೊತ್ತು ರಾಜ್ಯಕ್ಕೆ ತೋರಿಸಿದರು. ಪ್ರಿಯಾಂಕ್ ಖರ್ಗೆ ಪುಂಗಿ ಊದಿದರು. ಆದರೂ ಬುಟ್ಟಿಯಿಂದ ಹಾವು ಹೊರಗೆ ಬರಲೇ ಇಲ್ಲ. ಸಿದ್ದರಾಮಯ್ಯ ತಮ್ಮ ಟ್ವೀಟ್ ವಾಪಸ್ ಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು. ಈ ಪ್ರಕರಣದಿಂದ ಬಿಜೆಪಿಗೆ ಖಂಡಿತ ನಷ್ಟ ಆಗಲಿಲ್ಲ. ಇವತ್ತೂ ಹೇಳುತ್ತೇವೆ ದಾಖಲೆ ಇದ್ರೆ ಕೊಡಿ. ರಾಜ್ಯದ ಜನತೆಗೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಅನ್ನೋದು ಗೊತ್ತಾಗಿದೆ.
ಶ್ರೀಕಿ ಮೇಲೆ ಡ್ರಗ್ಸ್ ಪ್ರಕರಣದಲ್ಲಿ ಸುಮೋಟೊ ಕೇಸ್ ಹಾಕಿದ್ದು ಪೊಲೀಸರು, ಹ್ಯಾಕ್ ಪ್ರಕರಣ ಇದು ದೇಶಕ್ಕೆ ಹೊಸತು. ಹೀಗಾಗಿ ಆಳವಾಗಿ ತನಿಖೆ ಆಗಲು ಇಂಟರ್ ಪೋಲ್ ಗೆ ಲೆಟರ್ ಬರೆಯಬೇಕಾಗುತ್ತದೆ. ಈ ಪ್ರಕರಣದ ಆಳ ಆಗಲ ನೋಡಿ ಇಂಟರ್ ಪೋಲ್ ಗೆ ಲೆಟರ್ ಬರೆಯಬೇಕಾಗುತ್ತದೆ. ಈ ಪ್ರಕರಣ ಇಂಟರ್ ನ್ಯಾಷನಲ್ ಪ್ರಕರಣಕ್ಕೆ ಫಿಟ್ ಆಗುತ್ತಾ ಅಂತಾ ತನಿಖೆ ಮಾಡಿ ಬಳಿಕ ಇಂಟರ್ ಪೋಲ್ ಗೆ ಪತ್ರ ಬರೆಯಬೇಕಾಗುತ್ತದೆ. ಇಂಟರ್ ಪೋಲ್ ಅಂದರೆ ಪೊಲೀಸ್ ಠಾಣೆ ಅಲ್ಲ. ಇಂಟರ್ ಪೋಲ್ ಅಂದ್ರೆ ಬೇರೆ ಬೇರೆ ದೇಶಗಳಿಗೆ ಮಾಹಿತಿ ತಲುಪಿಸುವ ಏಜೆನ್ಸಿ.. ಹೀಗಾಗಿ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕಿಯನ್ನು ಹಿಡಿದು ಆತ ಹ್ಯಾಕರ್ ಅಂತ ಗೊತ್ತಾದ ಮೇಲೂ ಆಳವಾದ ತನಿಖೆ ನಡೆಸಿ ಇದು ಫಿಟ್ ಕೇಸ್ ಅಂತ ಗೊತ್ತಾದ ಮೇಲೆ ಇಂಟರ್ ಪೋಲ್ ಗೆ ಲೆಟರ್ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post