ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯ ಪ್ರಮುಖ ಸಭೆಯಲ್ಲಿ ಮಾತನಾಡುತ್ತಾ, ದೇಶಕ್ಕಾಗಿ ಸತ್ಯ-ನಿಷ್ಠೆಯಿಂದ ಕೆಲಸ ಮಾಡೋರೊಂದಿಗೆ.. ಅವರಿಗಾಗೇ ನಾನಿದ್ದೀನಿ ಎಂದು ಹೇಳಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕ್ರಿಯೇಟಿಂಗ್ ಸಿನರ್ಜೀಸ್ ಫಾರ್ ಸೀಮ್ಲೆಸ್ ಕ್ರೆಡಿಟ್ ಫ್ಲೋಅಂಡ್ ಎಕನಾಮಿಕ್ ಗ್ರೋಥ್ ಸಭೆಯಲ್ಲಿ ಮಾತನಾಡುತ್ತಾ, ಇಂದು ಭಾರತದ ಬಾಂಕಿಂಗ್ ಕ್ಷೇತ್ರ ಬಲಿಷ್ಠವಾಗುತ್ತಿದೆ. ಒಂದು ಕಡೆ ಜನಧನ್ ಅಕೌಂಟ್ ಮೂಲಕ ಕೋಟ್ಯಂತರ ಜನ ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಬೆಸೆದುಕೊಂಡಿದ್ದಾರೆ. ಇನ್ನೊಂದೆಡೆ, ಡಿಫೆನ್ಸ್ ಕಾರಿಡಾರ್, ಇಂಡಸ್ಟ್ರೀಯಲ್ ಕಾರಿಡಾರ್, ಬುಲೆಟ್ ಟ್ರೇನ್, ಸ್ವಾಮಿತ್ವ್ ಸ್ಕೀಮ್, ಆತ್ಮ ನಿರ್ಭರ ಭಾರತ ಯೋಜನೆ ದೇಶದ ವಿತ್ತೀಯ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತರುತ್ತಿವೆ. ಜೊತೆಗೆ ಇಡೀ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಯುಪಿಐ ಅಂದ್ರೆ ಡಿಜಿಟಲ್ ವ್ಯಾಲೆಟ್ ಸೌಲಭ್ಯವನ್ನು ನಾವು ಹೊಂದಿದ್ದೇವೆ. ಇದೇ ಕಾರಣದಿಂದಾಗಿ ಫಿನ್-ಟೆಕ್ ಕ್ಷೇತ್ರ ಕೂಡ ಗಣನೀಯವಾದ ಅಭಿವೃದ್ಧಿಯನ್ನು ಕಾಣುತ್ತಿದೆ. ಇದು ಬ್ಯಾಂಕಿಂಗ್ ಕ್ಷೇತ್ರವನ್ನ ಬಲಿಷ್ಠ ಗೊಳಿಸುವುದರ ಮೂಲಕ ಹೊಸ ಬೆಳವಣಿಗೆ ಅವಕಾಶ ಕಲ್ಪಿಸಿವೆ. ಇದನ್ನು ಬ್ಯಾಂಕಿಂಗ್ ಕ್ಷೇತ್ರ ಬಳಸಿಕೊಳ್ಳುವತ್ತ ಚಿಂತನೆ ನಡೆಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಲ್ಲದೇ ದೇಶದ ಬಗ್ಗೆ ಸತ್ಯ-ನಿಷ್ಠೆಯಿಂದ ನೀವು ಕಾರ್ಯ ನಿರ್ವಹಿಸಿ. ನೀವು ಅಂತಷ್ಟೇ ಅಲ್ಲ ಯಾರೇ ದೇಶಕ್ಕಾಗಿ ಸತ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೆ ಅಂಥವರ ಪರ ನಾನಿದ್ದೇನೆ. ಅಂಥವರಿಗಾಗಿಯೇ ನಾನಿದ್ದೇನೆ. ನೀವು ನನ್ನ ಮಾತಿನ ವಿಡಿಯೋ ಕ್ಲಿಪ್ ಅನ್ನ ನಿಮ್ಮ ಬಳಿ ಇಟ್ಟುಕೊಳ್ಳಿ. ನೀವು ಸತ್ಯ-ನಿಷ್ಠೆಯಿಂದ ದೇಶಕ್ಕಾಗಿ ಕಾರ್ಯ ಮಾಡಿ.. ನಿಮ್ಮ ಬೆಂಬಲಕ್ಕೆ ನಾನು ಗೋಡೆ ರೀತಿ ನಿಲ್ಲುತ್ತೇನೆ. ಒಂದು ವೇಳೆ ಈ ವೇಳೆ ನಿಮ್ಮಿಂದ ತಪ್ಪುಗಳಾದರೂ ನಿಮ್ಮ ರಕ್ಷಣೆಗಾಗಿ ನಾನಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Speaking at a symposium to ‘Build Synergy for Seamless Credit Flow and Economic Growth.’ https://t.co/yO3gKO5awV
— Narendra Modi (@narendramodi) November 18, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post