ಟೀಮ್ ಇಂಡಿಯಾದಲ್ಲಿ ಹೊಸ ನಾಯಕನ ಉದಯವಾಗಿದೆ. ಇದರೊಂದಿಗೆ ಹೊಸ ನಿರೀಕ್ಷೆಗಳು ಹುಟ್ಟುಕೊಂಡಿವೆ. ಈ ನಡುವೆ ಹಿಂದಿನ ನಾಯಕ ವಿರಾಟ್ ಕೊಹ್ಲಿಯಂತಲ್ಲದೆ, ತಂಡವನ್ನ ಜೊತೆ ಜೊತೆಯಾಗಿ ಕರೆದೊಯ್ಯುತ್ತಾರಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.
ನೂತನ ನಾಯಕ ರೋಹಿತ್ ಶರ್ಮಾ, ಫುಲ್ ಟೈಮ್ ನಾಯಕನಾಗಿ ಮೊದಲ ಪಂದ್ಯದಲ್ಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ. ನಿರೀಕ್ಷೆಯಂತೆ ನಾಯಕನಾಗಿ ಮೋಡಿ ಮಾಡಿರುವ ಹಿಟ್ಮ್ಯಾನ್, ಟೀಮ್ ಇಂಡಿಯಾದ ಸಕ್ಸಸ್ಫುಲ್ ಕ್ಯಾಪ್ಟನ್ ಆಗುವ ಎಲ್ಲಾ ಲಕ್ಷಣಗಳನ್ನ ಮೊದಲ ಪಂದ್ಯದಲ್ಲೇ ತೋರಿದ್ದಾರೆ.
ರೋಹಿತ ಶರ್ಮಾ, ನೂತನ ನಾಯಕನಾಗಿ ನೇಮಕವಾದ ಬೆನ್ನಲ್ಲೇ, ಹೊಸ ನಿರೀಕ್ಷೆಗಳ ಜೊತೆ ತಂಡದಲ್ಲಿನ ಗೊಂದಲಗಳಿಗೆ ಹೇಗೆ ಮದ್ದಾಗ್ತಾರೆಂಬ ಪ್ರಶ್ನೆ ಉದ್ಭವಗೊಂಡಿತ್ತು. ತಂಡದಲ್ಲಿನ ಗುಂಪುಗಾರಿಕೆಯಿಂದ ತಂಡದಲ್ಲಿ ಸಮನ್ವಯತೆ ಸಾಧಿಸ್ತಾರಾ ಎಂಬ ಅನುಮಾನ ಮೂಡಿತ್ತು. ಆದ್ರೆ, ಇದಕ್ಕೆಲ್ಲಾ ಹಿಟ್ಮ್ಯಾನ್ ರೋಹಿತ್ ಶರ್ಮಾ, ಮೊದಲ ಪಂದ್ಯದಲ್ಲೇ ಉತ್ತರ ನೀಡಿದ್ದಾರೆ.
ವಿರಾಟ್ಗಿಂತ ತಾನು ವಿಭಿನ್ನ ಅಂತ ತೋರಿಸಿದ ರೋಹಿತ್..!
ವಿರಾಟ್ ನಾಯಕನಾಗಿ ಆಟಗಾರರಿಗೆ ಲಭ್ಯರಾಗಲ್ಲ. ಸಹ ಆಟಗಾರರಿಂದ ಅಂತರ ಕಾಯ್ದುಕೊಳ್ಳುತ್ತಾರೆ ಎಂಬ ಗಂಭೀರ ಆರೋಪಗಳು, ಈ ಹಿಂದೆ ವಿರಾಟ್ ವಿರುದ್ಧ ಕೇಳಿ ಬಂದಿದ್ದವು. ಸ್ವತಃ ಆಟಗಾರರೇ ಬಿಗ್ಬಾಸ್ಗಳಿಗೆ ದೂರು ನೀಡಿದ್ದರು. ತಂಡದಲ್ಲಿನ ವಾತಾವರಣವೂ ಹದಗೆಟ್ಟಿತ್ತು. ಹೀಗಾಗಿ ರೋಹಿತ್ಗೆ ಇದು ಹೊಸ ಸವಾಲೇ ಆಗಿತ್ತು. ಆದ್ರೆ, ಸಹ ಆಟಗಾರರ ಜೊತೆ ನಡೆದುಕೊಂಡ ರೀತಿಯಿಂದ ತಾವೊಬ್ಬ ಜಂಟಲ್ಮ್ಯಾನ್ ಕ್ರಿಕೆಟರ್ ಎನಿಸಿದ್ದಾರೆ.
ಅದ್ರಲ್ಲೂ ನೆಟ್ಸ್ನಲ್ಲಿ ಯುವ ಆಟಗಾರರ ಜೊತೆ ಬೆರೆಯುತ್ತಾ? ಬೇಕಿರುವ ಟಿಪ್ಸ್ ನೀಡುತ್ತಾ.. ಆತ್ಮವಿಶ್ವಾಸವನ್ನ ತಂಬುವ, ಹಿಂಜರಿಕೆಯನ್ನ ತೊಡೆದು ಹಾಕುವ ಕೆಲಸದಲ್ಲಿ ನಿರತರಾಗಿದ್ದರು. ಸ್ನೇಹಯುತ ನಡೆಯ ಮೂಲಕ ತಾನು ‘ಎನಿ ಟೈಮ್ ಐ ಌಮ್ ಅವಲೇಬಲ್ ಫಾರ್ ಯು’ ಎಂಬ ಸಂದೇಶವನ್ನ ರವಾನಿಸಿದ್ದಾರೆ. ರೋಹಿತ್ ನಡೆದುಕೊಳ್ಳುತ್ತಿದ್ದ ರೀತಿ ಆಟಗಾರರಲ್ಲಿ ಹೊಸ ಬಾಂಡಿಂಗ್, ನಾವೊಂದೇ ಎಂಬ ಮನೋಭಾವವನ್ನ ಬಿತ್ತುವಂತ್ತಿತ್ತು.
ಧೋನಿಯನ್ನ ನೆನಪಿಸಿದ ಹಿಟ್ಮ್ಯಾನ್ ರೋಹಿತ್..!
ನಿಜಕ್ಕೂ ಸಹ ಆಟಗಾರರೊಂದಿಗೆ ರೋಹಿತ್ ನಡೆದುಕೊಳ್ಳುತ್ತಿದ್ದ ರೀತಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನೇ ನೆನಪಿಸುತ್ತಿತ್ತು. ಅದರಲ್ಲೂ ಆಟಗಾರರ ಜೊತೆ ನಿರಂತರ ಸಂಪರ್ಕದಲ್ಲಿರುತ್ತಿದ್ದ ಧೋನಿ, ಯಾವಾಗಲೂ ಸಹ ಆಟಗಾರರಿಗಾಗಿ ತಮ್ಮ ಕೊಠಡಿಯ ಡೋರ್ ಓಪನ್ ಇರುತ್ತಿತ್ತು. ತಂಡದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆ ಬಿತ್ತಿದ್ದ ಧೋನಿ, ಒಂದು ತಂಡವಾಗಿ ಮುನ್ನಡೆಸಿ ಸಕ್ಸಸ್ಫುಲ್ ಕ್ಯಾಪ್ಟನ್ ಎನಿಸಿಕೊಂಡಿದ್ದರು. ಆದ್ರೀಗ ರೋಹಿತ್ ಕೂಡ ಇದೇ ಹಾದಿಯಲ್ಲಿ ಸಾಗ್ತಿರೋದಂತು ಸತ್ಯ. ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆಯೇ ಸರಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post