ರಾಯಚೂರು: ಜಲಿಯನ್‍ವಾಲಾ ಬಾಗ್ ಹೇಳೋಕೆ ಬರದ ನೀವು ಹುಚ್ಚರು. ಸಿದ್ದರಾಮಯ್ಯ ಹೇಳಿಕೊಟ್ಟರೂ ಹೇಳೋಕೆ ಬರಲಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ತಿರುಗೇಟು ನೀಡಿದ್ದಾರೆ.
ಯೂಥ್ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಹ್ಯಾಕಿಂಗ್ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರೇ ನನಗೆ ಹೇಳಿದ್ದಾರೆ ಎಂದು ನ್ಯೂಸ್ಫಸ್ಟ್ ವಿಶೇಷ ಸಂದರ್ಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್, ಆರಗ ಜ್ಞಾನೇಂದ್ರ ಹುಚ್ಚ, ನಿಮ್ಹಾನ್ಸ್ಗೆ ಸೇರಿಸಿ ಎಂದು ಕಿಡಿಕಾರಿದ್ದರು.
ಸಿರವಾರ ಪಟ್ಟಣದಲ್ಲಿ ನಡೆದ ಜನಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಗೃಹ ಸಚಿವರು, ಡಿಕೆಎಸ್ರ ಈ ಹೇಳಿಕೆ ಕುರಿತಂತೆ ಕೆಂಡವಾದರು. ಸಂಘಟನಾತ್ಮಕವಾಗಿ ರಾಜಕೀಯಕ್ಕೆ ಬಂದವನು ನಾನು. ಕೊತ್ವಾಲ್ ರಾಮಚಂದ್ರನ ಜೊತೆ ಸೇರಿ ನಾನು ರಾಜಕೀಯಕ್ಕೆ ಬಂದಿಲ್ಲ. ಜಲಿಯನ್‍ವಾಲಾ ಬಾಗ್ ಹೇಳೋಕೆ ಬರದ ನೀವು ಹುಚ್ಚರು. ಸಿದ್ದರಾಮಯ್ಯ ಹೇಳಿಕೊಟ್ಟರೂ ಹೇಳೋಕೆ ಬರಲಿಲ್ಲ ಎಂದು ತಿರುಗೇಟು ನೀಡಿದರು.
ಶ್ರೀಕಿಯನ್ನ ಅರೆಸ್ಟ್ ಮಾಡಿದ್ರೆ ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡ್ತಿದ್ದಾರೆ. ಯಾವ ನೈತಿಕತೆಯಿಂದ ಪ್ರಶ್ನೆ ಮಾಡ್ತಿದ್ದಾರೆ. ಯು.ಬಿ ಸಿಟಿಯಲ್ಲಿ ಕಾಂಗ್ರೆಸ್ ಶಾಸಕನ ಮಗನ ಗಲಾಟೆಯಾದಾಗ ಅವನ ಜೊತೆ ಈ ಶ್ರೀಕಿ ಇದ್ದ. ಆದ್ರೂ ಅವನ್ನ ಅರೆಸ್ಟ್ ಮಾಡಲಿಲ್ಲ ಯಾಕೆ? ಸದ್ಯ ಅವನ ಅರೆಸ್ಟ್ ಮಾಡಿ ಎಲ್ಲಾ ವಿಚಾರ ಬಾಯಿ ಬಿಡಿಸಲಾಗಿದೆ. ಸಿದ್ದರಾಮಯ್ಯ, ಡಿಕೆಎಸ್ ಯಾಕೆ ಆವತ್ತು ಬಂಧಿಸಲಿಲ್ಲ. ಇವರ ಮಕ್ಕಳೇ ಅವನಿಗೆ ಲಕ್ಷಾಂತರ ಖರ್ಚು ಮಾಡಿ ಬಿಟ್ಟಿ ದುಡ್ಡು ಕೀಳೋ ಕೆಲಸ ಮಾಡ್ತಿದ್ರು. ಕಾಂಗ್ರೆಸ್ ನವರಿಗೆ ರಾತ್ರಿ ಕನಸಲ್ಲಿ ಮೋದಿ ಬಂದ್ರೆ ಹಾಸಿಗೆಯಲ್ಲಾ ಒದ್ದೆಯಾಗುತ್ತೆ. ಕೈ ನಾಯಕರು ಶ್ರೀಕಿಯನ್ನ ಯಾಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು.
ಅಲ್ಲದೇ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಕಾಂಗ್ರೆಸ್ ನವರೊಬ್ಬರು ಕೇಳಿದ್ರು. ಯುವ ಕಾಂಗ್ರೆಸ್ ಅಧ್ಯಕ್ಷ ಮತದಾನವನ್ನೂ ಹ್ಯಾಕ್ ಮಾಡಲಾಗಿದೆ. ಅದನ್ನೂ ಹ್ಯಾಕ್ ಮಾಡಿದ್ದರ ಬಗ್ಗೆ ನಾವು ಹೊರಗೆ ತರ್ತೇವೆ. ಅದನ್ನ ಹೊರಗೆ ತರದೇ ಇದ್ರೆ ನಾವು ಪೊಲೀಸನವರಲ್ಲ ಎಂದು ಸವಾಲು ಹಾಕಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]om
Discussion about this post