ನ್ಯೂಜಿಲೆಂಡ್ ತಂಡದ ಆಟಗಾರರು ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲೋದಕ್ಕೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ತಂಡದ ಪ್ರಮುಖ ಆಟಗಾರರು, ಟಿ20 ಸರಣಿಯನ್ನೇ ತ್ಯಾಗ ಮಾಡಿ, ಭಾರತದಲ್ಲಿ ಪ್ರತಿಷ್ಠಿತ ಟೆಸ್ಟ್ ಸರಣಿ ಗೆಲ್ಲಲು ತಂತ್ರ ರೂಪಿಸಿದ್ದಾರೆ. ಹಾಗಾದ್ರೆ ಟೆಸ್ಟ್ ಸರಣಿಗೆ ತಯರಾಗ್ತಿರೋ ಆಟಗಾರರು ಯಾರು..?
ಇಂಡೋ-ಕಿವೀಸ್ ಟಿ20 ಸರಣಿ ಈಗಾಗಲೇ ಶುರುವಾಗಿದೆ. ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ ನ್ಯೂಜಿಲೆಂಡ್, ಚುಟುಕು ಸರಣಿಗಿಂತ ಟೆಸ್ಟ್ ಸರಣಿ ಮೇಲೆ ಹೆಚ್ಚು ಫೋಕಸ್ ಮಾಡಿದೆ. ಶಾರ್ಟರ್ ಫಾರ್ಮೆಟ್ನಲ್ಲಿ ಸೂಪರ್ ಫಾರ್ಮ್ನಲ್ಲಿದ್ದ ಕಿವೀಸ್, ಟಿ20 ವಿಶ್ವಕಪ್ನಲ್ಲಿ ಫೈನಲ್ಗೇರಿ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಟೂರ್ನಿಯಲ್ಲಿ ಅಬ್ಬರಿಸಿದ ಆಟಗಾರರೇ, ಭಾರತದೆದುರಿನ T20 ಸರಣಿಯಿಂದ ಹಿಂದೆ ಸರಿದಿರೋದು, ಕೊಹ್ಲಿ ಪಡೆಗೆ ಎಚ್ಚರಿಕೆ ಸಂದೇಶ ರವಾನಿಸುವಂತೆ ಮಾಡಿದೆ.
ಸದ್ಯ ಟಿ20 ಸರಣಿಯಿಂದ ಹೊರಗುಳಿದಿರೋದು ಕ್ಯಾಪ್ಟನ್ ಕೇನ್ ವಿಲಿಯಮ್ಸನ್, ಆಲ್ರೌಂಡರ್ ಕೈಲ್ ಜೆಮಿಸನ್. ಜೊತೆಗೆ ವೇಗಿ ಟ್ರೆಂಟ್ ಬೋಲ್ಟ್ ಕೂಡ ಟಿ-20 ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ವಿಲಿಯಮ್ಸನ್, ಬೋಲ್ಟ್ ವಿಶ್ವಕಪ್ನಲ್ಲಿ ಅದ್ಭುತ ಫಾರ್ಮ್ನಲ್ಲಿದ್ರು. ಆದರೆ ವಿಶ್ವಕಪ್ನಲ್ಲಿ ಕಣಕ್ಕಿಳಿಯದ ಜೆಮಿಸನ್, ಭಾರತದ ವಿರುದ್ಧ ಆಡೋದಕ್ಕೆ ಸಿದ್ಧತೆ ಕೂಡ ಮಾಡಿಕೊಂಡಿದ್ರು. ಆದ್ರೆ ಕೊನೆ ಗಳಿಗೆಯಲ್ಲಿ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಕಿವೀಸ್, ರಹಸ್ಯವಾಗಿ ಟೆಸ್ಟ್ ಸರಣಿಗೆ ರಣತಂತ್ರವನ್ನ ರೂಪಿಸಿಸುತ್ತಿದೆ.
ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ತವಕ..!
ಟೆಸ್ಟ್ ಸರಣಿ ಕಿವೀಸ್ಗೆ ಅತ್ಯಂತ ಪ್ರತಿಷ್ಠಿತ ಸರಣಿ. ಹಾಗಂತ ಟಿ20 ಸರಣಿ ಪ್ರಮುಖ ಅಲ್ಲವೆಂದಲ್ಲ, ಏಕೆಂದ್ರೆ ಭಾರತದಲ್ಲಿ ಪ್ರವಾಸಿಗರು ಟೆಸ್ಟ್ ಗೆಲ್ಲೋದು, ಅಷ್ಟು ಸುಲಭವಲ್ಲ.! ಪಿಚ್ ಕಂಡೀಷನ್ ಭಾರತಕ್ಕೆ ಅನುಕೂಲವಾಗಲಿದ್ರೆ, ಪ್ರವಾಸಿಗರಿಗೆ ಪ್ರತಿಕೂಲ ಆಗಿರಲಿದೆ. ಹಾಗಾಗಿ ಟೆಸ್ಟ್ ಸರಣಿಯನ್ನ ಭಾರತದಲ್ಲಿ ಗೆದ್ದು, ಇತಿಹಾಸ ನಿರ್ಮಿಸೋದ ಕಿವೀಸ್ ಪ್ಲಾನ್.
ಇಂಜುರಿಯಿಂದ ತಪ್ಪಿಸಿಕೊಳ್ಳಲು ಇದೊಂದು ಕಿವೀಸ್ ಮಾರ್ಗ..!
T20 ಸರಣಿಗೆ ಸೂಕ್ತವಾದ ಆಟಗಾರರು, ತಂಡದಲ್ಲಿದ್ದಾರೆ. ವಿಶ್ವಕಪ್ನಲ್ಲಿ ಬೆಂಚ್ ಕಾದಿದ್ದ ಆಟಗಾರರನ್ನ ಕಣಕ್ಕಿಳಿಸಿ, ತಂಡದಲ್ಲಿ ರಿಫ್ರೆಶ್ ಆಗಿಸಲು ಮುಂದಾಗಿದೆ. ಆದರೆ ಟೆಸ್ಟ್ಗೆ ತಕ್ಕಂತ ಆಟಗಾರರು ಕಿವೀಸ್ನಲ್ಲಿಲ್ಲ. ಹಾಗಾಗಿ ವಿಲಿಯಮ್ಸನ್, ಜೆಮಿಸನ್ ಟಿ20 ಸರಣಿಯಲ್ಲೂ ಆಡಿದ್ರೆ, ಮಾನಸಿಕ ಮತ್ತು ದೈಹಿಕ ಪರಿಣಾಮ ಎದುರಿಸಬೇಕಾಗುತ್ತೆ. ಹಾಗೆಯೇ ಇಂಜುರಿಗೆ ಒಳಗಾಗಿ ಬಿಟ್ಟರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತೆ. ಇದರಿಂದ ಮೊದಲೇ ಯೋಜನೆ ರೂಪಿಸಿಕೊಂಡ ಕಿವೀಸ್, ಟೆಸ್ಟ್ಗಾಗಿ ಆಟಗಾರರಿಗೆ ವಿಶ್ರಾಂತಿ ನೀಡಿದೆ.
ತಂಡದಲ್ಲಿನ ಆಟಗಾರರ ಮೇಲಿನ ಕೆಲಸದ ಹೊರೆ ತಗ್ಗಿಸುವ ಕುರಿತು, ಭಾರತ ಈಗ ಚರ್ಚೆ ನಡೆಸ್ತಿದೆ. ಆದರೆ ಕಿವೀಸ್, ಭಾರತಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಚುಟುಕು ಸರಣಿಗೂ ಮುನ್ನವೇ ಆಟಗಾರರ ಒತ್ತಡವನ್ನ ಇಳಿಸುವ ಬಗ್ಗೆ ಪ್ಲಾನ್ ಮಾಡಿತ್ತು. ಅದನ್ನೇ ಈಗ ಅಳವಡಿಸಿಕೊಂಡಿದೆ. ಆ ಮೂಲಕ ಆಟಗಾರರಿಗೆ ವಿಶ್ರಾಂತಿ ಎಂಬಂತೆ ಬಿಂಬಿಸಿ, ಟೀಮ್ ಇಂಡಿಯಾಗೆ ಗುನ್ನಾ ಇಡೋದಕ್ಕೆ ಪಕ್ಕಾ ಯೋಜನೆ ರೂಪಿಸಿದೆ. ಹೀಗಾಗಿ ಭಾರತ, ಎಚ್ಚರಿಕೆ ವಹಿಸೋದು ಉತ್ತಮ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post