ಸ್ಯಾಂಡಲ್ವುಡ್ನಲ್ಲಿ ಸದ್ಯ ಕನ್ನಡದ ಥ್ರಿಬರ್ ಆರ್ ಜುಗಲ್ಬಂದಿ ಸಖತ್ ಸೌಂಡ್ ಮಾಡ್ತಿದೆ. ಥ್ರಿಬಲ್ ಅರ್ ಅಂದ್ರೆ ಟಾಲಿವುಡ್ನ ರಾಜ್ ಮೌಳಿ ನಿರ್ದೇಶದ ಸಿನಿಮಾ ಅಲ್ಲ. ಬದಲಿಗೆ ನಮ್ಮ ಚೆಂದದ ಚಂದನವನದ ಪ್ರತಿಭಾವಂತರಾಧ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಹಾಗೂ ರಕ್ಷೀತ್ ಶೆಟ್ಟಿ.. ಈ ತ್ರಿಮೂರ್ತಿಗಳು ಈಗಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ಒಂದಾಗಿದ್ದು, ಈಗ ಗರುಡ ಗಮನ ವೃಷಭ ವಾಹನದ ಹಾಡು ಮತ್ತು ಮೆಕಿಂಗ್ ಟಾಕ್ ಆಪ್ ದಿ ಟೌನ್ ಆಗಿದೆ.
ನಮ್ಮ ಗರುಡ ಗಮನ ವೃಷಭ ವಾಹನ ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಿದವರ ಅಭಿಪ್ರಾಯಗಳ ತುಣುಕು 😍 ನಿಮ್ಮಿಂದ ಬಂದಂತ ಪ್ರತಿಕ್ರಿಯೆ ನಮಗೆ ಸ್ಪೂರ್ತಿ. 😍 ನಾಳೆಯಿಂದ ವಿಶ್ವಾದ್ಯಂತ ಬಿಡುಗಡೆಯಾಲಿದ್ದೂ, ಎಲ್ಲರೂ ನೋಡಿ, ಅಭಿಪ್ರಾಯಗಳನ್ನು ತಿಳಿಸಿ. 😍#GGVVOnNov19 #GGVV #WelcomeToMangaladevi @RajbShettyOMK @m3dhun @rakshitshetty pic.twitter.com/q348yMbwKK
— Rishab Shetty (@shetty_rishab) November 18, 2021
ಗರುಡ ಗಮನ ವೃಷಭ ವಾಹನ ಟೈಟಲ್ ನಿಂದಲೇ ಸಖತ್ ಸದ್ದು ಮಾಡ್ತಿರುವ ಚಿತ್ರ.. ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕಾಂಬೋದಲ್ಲಿ ಈ ಚಿತ್ರ ಅರಳಿತ್ತು.. ಇನ್ನು ಸಿನಿಮಾವನ್ನು ಪ್ರೇಕ್ಷಕರ ಅಂಗಳಕ್ಕೆ ತಲುಪಿಸುವ ಜವಬ್ದಾರಿಯನ್ನು ಸಿಂಪಲ್ ಸ್ಟಾರ್ ರಕ್ಷೀತ್ ಶೆಟ್ಟಿ ವಹಿಸಿಕೊಂಡು, ಗರುಡ ಗಮನ ವೃಷಭ ವಾಹನ ತಂಡದ ಜೊತೆ ಕೈ ಜೋಡಿಸಿದ್ರು..ಯಾವಾಗ ಈ ಮೂರು ಜನ ಒಂದಾದ್ರೋ ಅವಾಗಲೇ ಈ ಚಿತ್ರದ ಸಿನಿರಸಿಕರಲ್ಲಿ ಕುತೂಗಲ ಮೂಡಿತ್ತು.
Ahhh… This sound 🔥🔥
Reactions from the GGVV Premiere Held Yesterday.Welcome to Mangaladevi 🔥
Paid Premieres happening today too. Get your tickets now!#GGVVOnNov19 @RajbShettyOMK @shetty_rishab @rakshitshetty @m3dhun @ParamvahStudios @Karthik1423 @KRG_Studios pic.twitter.com/L8j3cg8NDk— Garuda Gamana Vrishabha Vahana (@GGVVTheMovie) November 18, 2021
ಪ್ರೇಕ್ಷಕ ಮಹಾಶಯರಲ್ಲಿ ಮೂಡಿದ ಈ ಕುತೂಹಲ ನಿರೀಕ್ಷೆಯನ್ನು ಹುಸಿ ಮಾಡದ ಈ ಥ್ರಿಬಲ್ ಆರ್ ಜೋಡಿ ಈಗ ಚಿತ್ರದ ಹಾಡು ಹಾಗೂ ಮೇಕಿಂಗ್ನಿಂದಲೇ ಕುತೂಹಲ ತಣಿಸಿದ್ದಾರೆ.. ಅಷ್ಟೇ ಈ ಸಿನಿಮಾ ನೋಡಲೇ ಬೇಕು ಅನ್ನೊ ಕಾತರವನ್ನು ಚಿತ್ರಪ್ರೇಮಿಗಳಲ್ಲಿ ಹೆಚ್ಚಿಸಿದ್ದಾರೆ.
ಗರುಡ ಗಮನ ವೃಷಭ ವಾಹನ ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಈಗಾಗಲೇ ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿಯಾಗಿರುವ ಶೆಟ್ಟರ ಬಳಗ ಚಿತ್ರದ ಮೇಕಿಂಗ್ ಹಾಗೂ ಒಂದು ಹಾಡನ್ನು ರಿಲೀಸ್ ಮಾಡಿ. ಈ ಚಿತ್ರವನ್ನು ಯಾಕೇ ನೋಡಬೇಕು ಅನ್ನೋದಕ್ಕೆ ಕಾರಣ ಕೊಟ್ಟಿದ್ದಾರೆ.. ಚಿತ್ರದ ಮೆಕಿಂಗ್ ನೋಡಿದ್ರೆ ಈ ಸಿನಿಮಾ ನೋಡೊಕೆ ಅವರ ವಾಹನ ಏರಿ ಥಿಯೆಟರ್ ಕಡೆ ಹೋಗೊದಂತು ಗ್ಯಾರಂಟಿ.
#GarudaGamanaVrishabhaVahana Brilliant!!! Please book your tickets now! @RajbShettyOMK @shetty_rishab @rakshitshetty pic.twitter.com/gtC9v0GSWu
— Anup Bhandari (@anupsbhandari) November 18, 2021
ಅದೇನೆ ಇರಲಿ ಪ್ರತಿ ಸಲ ಸ್ಟ್ರಾಂಗ್ ಕಂಟೆಂಟ್ ಮೂಲಕ ಬರುವ ಶೆಟ್ರು ಬಳಗ. ಈಗ ಮತ್ತೆ ಅಂತದೇ ಸರಕನ್ನು ತೆರೆ ಮೇಲೆ ಕಟ್ಟಿ ಕೊಂಡು ಸಿನಿರಸಿಕರಿಗೆ ಮನರಂಜನೆಯ ಹಬ್ಬದೂಟ ಬಡಿಸಲು ಸಿದ್ದವಾಗಿದ್ದು,, ಕನ್ನಡದ ಈ ಥ್ರಿಬಲ್ ಅರ್ ಜೋಡಿಯ ಕೆಲಸವನ್ನು ಕನ್ನಡಿಗರು ಯಾವ ರೀತಿ ರಿಸೀವ್ ಮಾಡ್ತಾರೆ ಕಾಡು ನೋಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post