ರಾಂಚಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ಗಳ ಅಂತರದಿಂದ ಗೆದ್ದು ಬೀಗಿದೆ. ಇದರೊಂದಿಗೆ ಟೀಮ್ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿ ಕೈವಶ ಮಾಡಿಕೊಂಡಿದೆ. ಆದ್ರೆ, ಈ ಪಂದ್ಯದಲ್ಲಿ ಆತಂಕ ಮೂಡಿಸುವಂತೆ ಸನ್ನಿವೇಶಕ್ಕೆ ಕಾರಣವಾಗಿ ಗಮನ ಸೆಳೆದಿದೆ.
ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್ ವೇಳೆ ರೋಹಿತ್ ಶರ್ಮಾರ ಅಭಿಮಾನಿಯೊರ್ವ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ್ದಾನೆ. ಈ ವೇಳೆ ಮಿಡ್ ಆನ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಬಳಿ ಅಭಿಮಾನಿ ತೆರಳಿದ್ದಾನೆ.
ಇದನ್ನ ಗಮನಿಸಿದ ರೋಹಿತ್ ದೂರದಲ್ಲೇ ನಿಲ್ಲುವಂತೆ ಸೂಚಿದರು. ಇದನ್ನ ಅಂಗೀಕರಿಸಿದ ಅಭಿಮಾನಿ ದೂರದಿಂದಲೇ ನಮಸ್ಕರಿಸಿದ್ದಾನೆ. ಈ ವೇಳೆ ಕಾರ್ಯ ಪ್ರವೃತ್ತರಾದ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನ ಹೊರಗೆ ಎಳೆದೊಯ್ದಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
And a fan stormed into the field!!! The fellow sitting beside me, “ab maar khaaye chahe jo ho uska Sapna poora ho gaya! Ab yeh Ranchi mein Hatia mein Jharkhand mein poore India mein famous ho gaya!!” #IndiaVsNewZealand #INDVsNZT20 #fans #CricketTwitter pic.twitter.com/6NsIQDY0fO
— Sunchika Pandey/संचिका पाण्डेय (@PoliceWaliPblic) November 19, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post