ಮಂಗಳೂರು: ನಗರದ SDPI ಮುಖಂಡ ಅಬೂಬಕ್ಕರ್ ಕುಳಾಯಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರತರವಾದ ವಾಗ್ದಾಳಿ ನಡೆಸಿದ್ದು ನಾವು ಮಸಲ್ ಪವರ್ ಯೂಸ್ ಮಾಡೋಕು ರೆಡಿ ಇದ್ದೇವೆ ಎಂದು ಪ್ರಚೋದನಾಕಾರಿ ಹೇಳಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಎಸ್ಡಿಪಿಐಗೆ ಸೇರೋದಾದ್ರೆ ಆಸ್ಪತ್ರೆಯಲ್ಲಿ ಮಲಗೋಕು, ಜೈಲಿಗೆ ಹೋಗೋಕು, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು ಎಂದು ನಮ್ಮ ಮುಂಖಂಡರು ಬಹಿರಂಗವಾಗಿ ಹೇಳಿದ್ದಾರೆ.
ಇದನ್ನೂ ಓದಿ:‘ಕಾಂಗ್ರೆಸ್ಸಿಗರನ್ನು ಸ್ಮಶಾನಕ್ಕೆ ಕಳಿಸೋಕೂ ಗೊತ್ತಿದೆ’ ಕೈ ನಾಯಕರಿಗೆ ಎಚ್ಚರಿಕೆ ನೀಡಿದ SDPI ಮುಖಂಡ
ನಮ್ಮ ಪಕ್ಷದ ಬೆಳವಣಿಗೆಯನ್ನು ಕಾಂಗ್ರೆಸ್ಗೆ ನೋಡಲಾಗುತ್ತಿಲ್ಲ. ಅದನ್ನು ಕಂಡು ಅವರಿಗೆ ಸಹಿಸಲಿಕ್ಕಾಗುತ್ತಿಲ್ಲ ಹೀಗಾಗಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇಷ್ಟರವರೆಗೆ ನಾವು ತಲೆ ತಗ್ಗಿಸಿದ್ದೇವೆ, ಆದರೆ ನಮಗೆ 2 M ಇದೆ. ಒಂದು ಮ್ಯಾನ್ ಪವರ್, ಇನ್ನೊಂದು ಮಸಲ್ ಪವರ್. ಇನ್ನೆಲ್ಲಿಯಾದರೂ ನಮ್ಮ ಪಕ್ಷದ ಕಾರ್ಯಕರ್ತರನ್ನ ಮುಟ್ಟಿದರೆ ಒಂದು M ಯೂಸ್ ಮಾಡ್ತೇವೆ. ಎಸ್ಡಿಪಿಐಗೆ ಸೇರೋದಾದ್ರೆ ಆಸ್ಪತ್ರೆ ಮಲಗೋಕೆ, ಜೈಲಿಗೆ ಹೋಗೋಕೆ, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು. ಹಾಗಂತ ನಿಮ್ಮ ದಬ್ಬಾಳಿಕೆ, ದೌರ್ಜನ್ಯಕ್ಕೆ ನಾವು ಬಗ್ಗುವವರಲ್ಲ ಎಂದು ಅಬೂಬಕರ್ ಹೇಳಿದ್ದಾರೆ. ಸದ್ಯ ಎಸ್ಡಿಪಿಐ ಮುಖಂಡನ ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ:ಮಂಗಳೂರಿನಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಡ್ರಗ್ಸ್ ಜಾಲ..? ಪ್ರತಿಷ್ಠಿತ ಕಾಲೇಜಿನ 5 ವಿದ್ಯಾರ್ಥಿಗಳು ಅರೆಸ್ಟ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post