ಬಳ್ಳಾರಿ: ತುಂಗಭದ್ರಾ ನದಿಯಲ್ಲಿ ಏಕಾಏಕಿ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ಮೂವರು ಕುರಿಗಾಹಿಗಳು ನಡುಗಡ್ಡೆಯಲ್ಲಿ ಸಿಲುಕಿರುವ ಘಟನೆ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.
ತುಂಗಭದ್ರಾ ನದಿಯಲ್ಲಿ ಜಿಲ್ಲೆಯಲ್ಲಿ ಭರ್ಜರಿ ಮಳೆ ಹಿನ್ನೆಲೆ ಹರಿವಿನ ಪ್ರಮಾಣ ದಿಢೀರ್ನೆ ಹೆಚ್ಚಾಗಿದೆ.. ಪರಿಣಾಮ ಕುರಿ ಮೇಯಿಸಲು ತೆರಳಿದ್ದ ಗ್ರಾಮದ ವೀರೇಶಪ್ಪ, ಮಾರಪ್ಪ ಹಾಗೂ ಮೂಕಯ್ಯ ಎಂಬುವವರು ನಡುಗಡ್ಡೆಯಲ್ಲಿ ಸಿಕ್ಕು ಸಂಕಷ್ಟ ಎದುರಿಸುತ್ತಿದ್ದಾರೆ. ನಿನ್ನೆಯಿಂದ ತುಂಗಭದ್ರ ನದಿ ನಡುಗಡ್ಡೆಯಲ್ಲಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಬರುವಾಗ ಬರಲಿಲ್ಲ ಮಳೆರಾಯ.. ಹೋಗುವಾಗ ಮುನಿದ ವರುಣದೇವ.. ಎಲ್ಲೆಲ್ಲಿ ಏನೆಲ್ಲಾ ಆಗ್ತಿದೆ..?
ಇನ್ನು ಇವರ ಜೊತೆ ನೂರಕ್ಕೂ ಅಧಿಕ ಕುರಿಗಳು ಸಹಿತ ನಡುಗಡ್ಡೆಯಲ್ಲಿ ಸಿಲುಕೊಂಡಿದ್ದು ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಚರಣೆ ಶುರು ಮಾಡಿದ್ದಾರೆ ಎಂದು ನ್ಯೂಸ್ಫಸ್ಟ್ಗೆ ಸಿರಗುಪ್ಪ ತಹಶೀಲ್ದಾರ್ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರೈತರ ಬೆನ್ನು ಮುರಿದ ಮಳೆರಾಯ; ಶಿವಮೊಗ್ಗ ಜಿಲ್ಲೆಯಲ್ಲಿ 100 ಹೆಕ್ಟೇರ್ ಭತ್ತ & ಮೆಕ್ಕೆಜೋಳ ನಾಶ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post