ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಗೆ ಟೀಂ ಮ್ಯಾನೇಜ್ಮೆಂಟ್ ಆಯ್ಕೆ ಮಾಡಿರುವ ತಂಡದ ಕುರಿತು ಪಾಕ್ನ ಮಾಜಿ ವೀಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ತಮ್ಮ ಯ್ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು ಟೀಂ ಮ್ಯಾನೇಜ್ಮೆಂಟ್ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಗೆ ಬಲಿಷ್ಠವಾದ ತಂಡವನ್ನು ಆಯ್ಕೆ ಮಾಡಿದೆ ಎಂದಿದ್ದಾರೆ. ಈ ತಂಡವು ಉತ್ತಮ ಯುವ ಆಟಗಾರರನ್ನು ಹೊಂದಿದ್ದು ಅತ್ಯಂತ ಗಟ್ಟಿತನದಿಂದ ಕೂಡಿದೆ. ಜೊತೆಗೆ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಎದುರು ಕೂಡ ಉತ್ತಮ ಆಟವನ್ನು ಟೀಂ ಇಂಡಿಯಾದ ಆಟಗಾರರು ಪ್ರದರ್ಶಿಸಿದ್ದರು ಎಂದು ಕಮ್ರಾನ್ ಕೊಂಡಾಡಿದ್ದಾರೆ.
ಮುಂದಿನ ತಿಂಗಳು ಸೌಥ್ ಆಫ್ರಿಕಾ ಪ್ರವಾಸ ನಿಮಿತ್ತ ಸೆಲೆಕ್ಷನ್ ಕಮೀಟಿ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಅವರನ್ನು ವಿಶ್ರಾಂತಿಗಾಗಿ ಈ ಸೀರಿಸ್ನಿಂದ ಕೈ ಬಿಡಲಾಗಿದೆ. ಇನ್ನು ನೂತನ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ಕೂಡ ಜವಾಬ್ದಾರಿಯುತ ಆಟದ ಜೊತೆ ನಾಯಕ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ ಎಂದು ಕಮ್ರಾನ್ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post