ಸೀರಿಯಲ್ ಲೋಕದಲ್ಲಿ ಗಟ್ಟಿ ನೆಲೆ ಕಾಣುವುದೂ ಅಷ್ಟು ಸುಲಭವಲ್ಲ. ಪ್ರೇಕ್ಷಕರನ್ನ ಹಿಡಿದಿಡಲು ಪ್ರತಿ ಕ್ಷಣ ಸಾಹಸ ಪಡ್ಬೇಕು. ಒಂಚೂರು ಆ ಕಡೆ ಈ ಕಡೆಯಾದ್ರೂ ಆ ವಾರದ ಟಿಆರ್ಪಿ ಲೆಕ್ಕಾಚಾರದಲ್ಲಿ ಧಾರಾವಾಹಿಗಳು ನೆಲಕಚ್ಚಿ ಬಿಡುತ್ತವೆ. ಈಗ ಅಂತಹದ್ದೇ ಸುಳಿಗೆ ಸಿಕ್ಕಿ ಹಾಕಿಕೊಂಡಿದೆ ನಿನ್ನಿಂದಲೇ ಸೀರಿಯಲ್.
ಹೌದು, ಮೊನ್ನೆ ಮೊನ್ನೆಯಷ್ಟೆ ಲಾಂಚ್ ಆಗಿದ್ದ ಧಾರಾವಾಹಿ ಈಗ ವೈಂಡಪ್ ಆಗ್ತಾಯಿದೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನ್ನಿಂದಲೇ ಸೀರಿಯಲ್ ಲೀಡ್ ಪಾತ್ರದಲ್ಲಿ ಈ ಮೊದಲು ಆಕೃತಿ ಎಂಬ ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದ ಚಿತ್ರಶ್ರೀ ಸುರೇಶ್ ಈ ಧಾರಾವಾಹಿಯ ನಾಯಕಿ ಅನನ್ಯ ಪಾತ್ರವನ್ನ ನಿರ್ವಹಿಸುತ್ತಿದ್ದರೇ ನಾಯಕನ ಪಾತ್ರಕ್ಕೆ ನಟ ದೀಪಕ್ ಮಹಾದೇವ್ ಬಣ್ಣ ಹಚ್ಚಿದ್ದಾರೆ.
ಹೀರೋ ವಿದೇಶದಿಂದ ಕಾರಣಾಂತರಗಳಿಂದ ಭಾರತಕ್ಕೆ ವಾಪಸ್ಸಾದಾಗ ಅವನ ಕುಟುಂಬ ಹಾಗೂ ಕಥೆಯ ನಾಯಕಿ ಕುಟುಂಬದ ನಡುವೆ ಕೆಲ ಭಿನ್ನಾಭಿಪ್ರಾಯಗಳಿದ್ದು ಅದೆಲ್ಲವನ್ನು ಅರಿತ ನಾಯಕ ವರುಣ್ ತನ್ನ ಸಮಸ್ಯೆಗಳಿಂದ ಹೊರ ಬಂದು ಎರಡು ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯಲು ಪ್ರಯತ್ನಿಸುತ್ತಾನೆ. ಈ ನಡುವೇ ನಾಯಕಿ ಅನನ್ಯಾಳನ್ನ ಮದುವೆಯಾಗುತ್ತಾನೆ ವರಣ್..ನಂತರ ಅವರ ದಾಂಪತ್ಯದ ಆಗೂ ಹೋಗುಗಳ ನಡುವೆ ಕತೆ ಸಾಗುತ್ತಿರುತ್ತದೆ.
ಕಿರುತೆರೆ, ಹಿರಿತೆರೆಯಲ್ಲಿ ಹೆಸರು ಮಾಡಿರುವ ನಟ ರಾಜೇಶ್ ನಟರಂಗ ಅವರ ಧ್ವನಿ ಕ್ರಿಯೇಷನ್ನಡಿ ಮೂಡಿ ಬಂದಿದ್ದ ನಿನ್ನಿಂದಲೇ ಧಾರಾವಾಹಿ ವೈಂಡಪ್ ಆಗುತ್ತಿದ್ದು, ಜನರ ಮನ ಗೆಲ್ಲುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ:ಹಿಟ್ಲರ್ ಕಲ್ಯಾಣ ಹೊಸ ವಿಲನ್ ಎಂಟ್ರಿ; ಇವರು ಯಾರು ಅಂತಾ ಗೊತ್ತಾ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post