ಮೆಗಾಸ್ಟಾರ್ ಚಿರಂಜೀವಿ ಮುಂದಿನ ಸಿನಿಮಾದ ”ಗಾಡ್ ಫಾದರ್” ನಲ್ಲಿ ನಯನತಾರಾ ನಟಿಸುತ್ತಿದ್ದು, 4 ಕೋಟಿ ಸಂಭಾವನೆಯನ್ನ ಕೇಳುತ್ತಿದ್ದಾರೆ ಅನ್ನೋ ಗಾಸಿಫ್ ಇನ್ನು ಚೆರ್ಚೆ ಆಗುತ್ತಿರುವಾಗಲೇ, ನಯನತಾರಾ ಬಗ್ಗೆ ಮತ್ತೊಂದು ವಿಷಯ ಗಾಸಿಪ್ ಪಂಡಿತರ ಬಾಯಿಗೆ ಸಿಕ್ಕಿದೆ.
ಚಿರಂಜೀವಿಯವರ ”ಗಾಡ್ ಫಾದರ್” ಸಿನಿಮಾ ಮಲಯಾಳಂನಲ್ಲಿ ಬಂದ ಮೋಹನ್ ಲಾಲ್ ನಟನೆಯ ”ಲೂಸಿಫರ್” ಸಿನಿಮಾದ ರಿಮೇಕ್. ”ಗಾಡ್ ಫಾದರ್” ಸಿನಿಮಾದಲ್ಲಿ ನಯನ ತಾರಾ ಮಾಡುತ್ತಿರುವ ಪಾತ್ರವನ್ನು ”ಲೂಸಿಫರ್” ನಲ್ಲಿ ಮಂಜು ವಾರಿಯರ್ ಮಾಡಿದ್ದು, ಮಂಜು ವಾರಿಯರ್ ಗಂಡನ ಪಾತ್ರದಲ್ಲಿ ಬಾಲಿವುಡ್ನ ವಿವೇಕ್ ಒಬೆರಾಯ್ ನಟಿಸಿದ್ರು. ತೆಲುಗು ರಿಮೇಕ್ ”ಗಾಡ್ ಫಾದರ್”ನಲ್ಲಿ ನಯನತಾರಾ ಗಂಡನ ಪಾತ್ರದಲ್ಲಿ ಟಾಲಿವುಡ್ ಯುವ ಪ್ರತಿಭೆ ಸತ್ಯದೇವ್ ನಟಿಸುತ್ತಿದ್ದಾರೆ.
ಆದರೆ ಈಗ ಎದ್ದಿರುವ ಗಾಳಿ ಸುದ್ದಿಯ ಪ್ರಕಾರ ನಯನತಾರಾ ತನ್ನ ಗಂಡನ ಪಾತ್ರ ಮಾಡುತ್ತಿರುವ ಸತ್ಯದೇವ್ ಬದಲಾಗಿ ಬೇರೆಯವರನ್ನು ಆಯ್ಕೆ ಮಾಡುವಂತೆ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಸೂಚನೆ ನೀಡಿದ್ದಾರಂತೆ. ಮತ್ತೊಂದು ಮಾಹಿತಿ ಪ್ರಕಾರ ನಯನತಾರಾಗೆ ಜೋಡಿಯಾಗಿ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ರನ್ನು ಅಪ್ರೋಚ್ ಮಾಡೋ ಪ್ಲಾನ್ನಲ್ಲಿದೆಯಂತೆ ”ಗಾಡ್ ಫಾದರ್” ಚಿತ್ರ ತಂಡ. ಈ ವಿಚಾರ ನಿಜ ಆದರೆ, ಮತ್ತೊಮ್ಮೆ ಚಿರಂಜೀವಿ ಮತ್ತು ಸುದೀಪ್ರನ್ನು ಒಂದೇ ಸ್ರ್ಕೀನ್ ಮೇಲೆ ನೋಡೋ ಭಾಗ್ಯ ಚಿತ್ರ ಪ್ರೇಮಿಗಳ ಪಾಲಾಗಲಿದೆ.
ಇದನ್ನೂ ಓದಿ: ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಮರ್ಡರ್ ಬೆಡಗಿ: ಜಾಕ್ವೆಲಿನ್ ಹೊಸ ಅವತಾರಕ್ಕೆ ಫ್ಯಾನ್ಸ್ ಖಲ್ಲಾಸ್!
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post