ಮುಂದಿನ ವರ್ಷ ‘ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲೇ ಆಯೋಜಿಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಈ ಸಂಬಂಧ ಮಾತಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಸೀಸನ್ 15 ಭಾರತದಲ್ಲೇ ನಡೆಯಲಿದೆ ಎಂದರು.
ಈಗ ಎರಡು ಹೊಸ ತಂಡಗಳ ಸೇರ್ಪಡೆಯಾಗಿವೆ. ಹೀಗಾಗಿ ಐಪಿಎಲ್ ಟೂರ್ನಿಯು ಮತ್ತಷ್ಟು ರೋಚಕವಾಗಿರಲಿದೆ. ಸದ್ಯದಲ್ಲೇ ಮೆಗಾ ಹರಾಜು ನಡೆಯಲಿದ್ದು, ಹೊಸ ತಂಡಗಳು ಹೇಗಿರಲಿವೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದರು.
ಮಾರಕ ಕೊರೋನಾ ಕಾರಣದಿಂದಾಗಿ ಕಳೆದ ಐಪಿಎಲ್ ಅರ್ಧ ಭಾರತದಲ್ಲಿ ನಡೆಸಲಾಯ್ತು. ಬಳಿಕ ಅರ್ಧ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು.
ಇದನ್ನೂ ಓದಿ: NCA ವೇಗದ ಬೌಲಿಂಗ್ ಕೋಚ್ ಆಗಿ ಟ್ರಾಯ್ ಕೂಲಿ; ಕರೆ ತರುವಲ್ಲಿ ಸೌರವ್ ಗಂಗೂಲಿ ಯಶಸ್ವಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post