ಇತ್ತೀಚೆಗೆ ಆರ್ಸಿಬಿ ತಂಡದ ಆಪದ್ಬಾಂಧವ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಎಬಿಡಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ಕ್ರಿಸ್ ಗೇಲ್ ನಿವೃತ್ತಿ ಮಾಡಬಹುದು ಎಂಬ ಚರ್ಚೆಗಳು ಜೋರಾಗಿ ನಡೆದವು. 42 ವರ್ಷದ ಕ್ರಿಸ್ ಗೇಲ್ ಮುಂದಿನ ಐಪಿಎಲ್ ಸೀಸನ್ಗೆ ಲಭ್ಯವಿದ್ದಾರಾ? ಇಲ್ಲವೋ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು.
ಈಗ ಎಬಿಡಿ ನಿವೃತ್ತಿ ಬೆನ್ನಲ್ಲೇ ಕ್ರಿಸ್ ಗೇಲ್ ಟ್ವೀಟ್ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಈಗಲೇ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದಿಲ್ಲ ಎಂದಿದ್ದಾರೆ.
ಇನ್ನು, ಮುಂದಿ ಐಪಿಎಲ್ ಸೀಸನ್ಗೂ ಕ್ರಿಸ್ ಗೇಲ್ ಲಭ್ಯವಾಗಲಿದ್ದಾರೆ. ಇವರ ಹೆಸರು ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಹಾಗೆಯೇ ಪಂಜಾಬ್ ಕೂಡ ಕ್ರಿಸ್ ಗೇಲ್ ಅವರನ್ನು ಬಿಡುಗಡೆ ಮಾಡಲಿದ್ದು, 10 ತಂಡಗಳಲ್ಲಿ ಯಾವುದಾದ್ರೂ ಒಂದು ಫ್ರಾಂಚೈಸಿ ಖರೀದಿಸಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post