ಪವನ್ ಒಡೆಯರ್ ನಿರ್ದೇಶನದ, ಜೈ ಆದಿತ್ಯ ಫಿಲಂಸ್ ಬ್ಯಾನರ್ ನಡಿಯಲ್ಲಿ ಅದ್ದೂರಿ ಚಿತ್ರಗಳ ನಿರ್ಮಾಪಕ ಸಿ.ಆರ್ ಮನೋಹರ್ ನಿರ್ಮಾಣದ ಬಹು ನಿರೀಕ್ಷಿತ ‘ರೇಮೊ’ ಚಿತ್ರದ ಫಸ್ಟ್ ಲುಕ್ ಟೀಸರ್ ಇದೇ 25ನೇ ತಾರೀಖು ಲಾಂಚ್ ಆಗಲಿದೆ.
ಮನೋಹರ್ ಸಹೋದರ ‘ರೋಗ್’ ಖ್ಯಾತಿಯ ಇಶಾನ್ ನಾಯಕನಾಗಿ , ಅಶಿಕಾ ರಂಗನಾಥ್ ನಾಯಕಿಯಾಗಿ, ಶರತ್ ಕುಮಾರ್, ಮಧುಬಾಲ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವೈದಿ ಛಾಯಾಗ್ರಹಣವಿರೋ ಈ ಚಿತ್ರದ ಮೇಲೆ ಸ್ಯಾಂಡಲ್ವುಡ್ನಲ್ಲಿ ಹಾಗೂ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಹುಟ್ಟಿಸಿದೆ.
ಇತ್ತೀಚಿಗಷ್ಟೆ ಚಿತ್ರೀಕರಣ ಮುಗಿಸಿ ಕುಂಬಳ ಕಾಯಿ ಹೊಡೆದು ಭರದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರೋ ಚಿತ್ರತಂಡ. ಹೊಸ ವರ್ಷಕ್ಕೆ ಚಿತ್ರವನ್ನ ಪ್ರೇಕ್ಷಕರೆದುರಿಗೆ ತರೋ ಪ್ರಯತ್ನದಲ್ಲಿದೆ. ಅದರ ಮೊದಲ ಭಾಗವಾಗಿ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡೋದಕ್ಕೆ ಮುಂದಾಗಿದೆ. ವಿಶೇಷ ಎಂಬತೆ ಈ ಟೀಸರ್ನ್ನು ಚಿತ್ರರಂಗದ ಟಾಪ್ ನಿರ್ಮಾಪಕರು ಹಾಗೂ ನಿರ್ದೇಶಕರು ಒಂದೇ ವೇದಿಕೆಯಲ್ಲಿ ಲಾಂಚ್ ಮಾಡ್ತಿದ್ದಾರೆ.
ಈ ಮೆಗಾ ಲಾಂಚ್ ಇವೆಂಟ್ನಲ್ಲಿ ಎ.ಹರ್ಷ, ಭರ್ಜರಿ ಚೇತನ್ ಕುಮಾರ್, ತರುಣ್ ಸುಧೀರ್, ಯೋಗರಾಜ್ ಭಟ್, ಜೋಗಿ ಪ್ರೇಮ್, ಎ.ಪಿ. ಅರ್ಜುನ, ಕೆ.ಪಿ ಶ್ರೀಕಾಂತ್, ಕಾರ್ತಿಕ್. ಕೆ.ಮಂಜು, ಜಯಣ್ಣ ಭೋಗೇಂದ್ರ ಸೇರಿದಂತೆ ಟಾಪ್ ಮೋಸ್ಟ್ ಪ್ರೋಡ್ಯೂಸರ್ಸ್ ಆಂಡ್ ಡೈರೆಕ್ಟರ್ಸ್ ಭಾಗಿಯಾಗಲಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ರಿಲೀಸ್ ಆಗ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post