ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಬೌನ್ಸ್ ಬ್ಯಾಕ್ ಮಾಡಿದೆ. ಕಿವೀಸ್ ಸರಣಿಯಲ್ಲಿ ಟೀಮ್ ಇಂಡಿಯಾ, ಕೆಲ ಮಹತ್ವದ ಪಾಠಗಳನ್ನೂ ಕಲಿತಿದೆ. ಇದು ಮುಂಬರುವ ದಿನಗಳಲ್ಲಿ, ಟೀಮ್ ಇಂಡಿಯಾ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಅನ್ನೋದನ್ನ ಈ ಮುಂದೆ ನೋಡೋಣ.
ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ, ಟಿ-ಟ್ವೆಂಟಿ ಸರಣಿ ಗೆದ್ದಿದೆ. ಸೀನಿಯರ್ ಆಟಗಾರರ ಅಲಭ್ಯತೆಯಲ್ಲೂ ಯುವ ಭಾರತ, ಅದ್ಭುತ ಪ್ರದರ್ಶನ ತೋರಿದೆ. ಹೀಗಾಗಿ ಯುವ ಆಟಗಾರರ ಮೇಲೆ ಭರವಸೆ ಹೆಚ್ಚಾಗಿದೆ. ಜೊತೆಗೆ ಟೀಮ್ ಇಂಡಿಯಾ ಸಾಕಷ್ಟು ಪಾಠ ಕಲಿತಿದೆ. ಹಾಗೇ ಮುಂದಿನ ಸರಣಿಗಳಿಗೆ ಸಿದ್ಧತೆ ಕೂಡ ಮಾಡಿಕೊಳ್ಳಬೇಕಿದೆ.
ರೋಹಿತ್-ರಾಹುಲ್ ಆರಂಭಿಕರಾಗಿಯೇ ಕಣಕ್ಕಿಳಿಯಬೇಕು..
ಯೆಸ್..! ರೋಹಿತ್ - ರಾಹುಲ್ ಬಿರುಸಿನ ಓಪನಿಂಗ್ ನೀಡ್ತಾರೆ. ಪವರ್ ಪ್ಲೇನಲ್ಲಿ ಬಿಗ್ ಸ್ಕೋರ್ ಕಲೆ ಹಾಕ್ತಾರೆ. ಇಬ್ಬರ ಅಂಡರ್ಸ್ಟಾಂಡಿಂಗ್ ಕೂಡ ಸಖತ್ತಾಗಿದೆ. ಇದು ತಂಡಕ್ಕೆ ಗುಡ್ ಫೌಂಡೇಶನ್ ಹಾಕೋದಕ್ಕೆ ನೆರವಾಗ್ತಿದೆ. ಹಾಗಾಗಿ ಈ ಇಬ್ರನ್ನೇ ಆರಂಭಿಕರಾಗಿ ಕಣಕ್ಕಿಳಿಸಬೇಕು. ಲೆಫ್ಟ್, ರೈಟ್ ಕಾಂಬಿನೇಷನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು.
ಫಿಂಗರ್ ಸ್ಪಿನ್ನರ್ಗಳಿಗೆ ತಂಡದಲ್ಲಿ ಅವಕಾಶ ನೀಡಬೇಕು..
ಫಿಂಗರ್ ಸ್ಪಿನ್ನರ್ಗಳ ಮೇಲೆ ಕ್ಯಾಪ್ಟನ್ಗಳು, ಭರವಸೆ ಇಡಬೇಕು. ಯಾಕಂದ್ರೆ ಫಿಂಗರ್ ಸ್ಪಿನ್ನರ್ಸ್ಮ್ಯಾಚ್ವಿನ್ನರ್ಸ್ ಆಗಬಲ್ಲರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಸ್ಪೆಲ್, ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಹಾಗಾಗಿ ರಿಸ್ಟ್ ಸ್ಪಿನ್ನರ್ಗಳಂತೆ, ಫಿಂಗರ್ ಸ್ಪಿನ್ನರ್ಗಳಿಗೂ ತಂಡದಲ್ಲಿ ಅವಕಾಶ ನೀಡಬೇಕು.
ಮಿಡಲ್ ಆರ್ಡರ್ ಚೇತರಿಕೆಗೆ ಬೇಕಿದೆ ಕಾಲಾವಕಾಶ..
ಕಿವೀಸ್ ಸರಣಿಯಲ್ಲಿ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕ, ದಿಢೀರ್ ಕುಸಿತ ಕಾಣ್ತು. ಅನಾನುಭವಿ ಬ್ಯಾಟರ್ಗಳೇ ಇದ್ದದ್ದೇ ಅದಕ್ಕೆ ಕಾರಣ. ಸೂರ್ಯಕುಮಾರ್, ಶ್ರೇಯಸ್, ವೆಂಕಟೇಶ್ ಅಯ್ಯರ್, ಪಂತ್ಗೆ ಒತ್ತಡವನ್ನ ನಿಭಾಯಿಸುವ ಶಕ್ತಿ ಸಾಲದು. ಹೀಗಾಗಿ ಮಧ್ಯಮ ಕ್ರಮಾಂಕ ಕುದುರಿಕೊಳ್ಳಲು ಇನ್ನೂ ಕಾಲಾವಕಾಶ ಬೇಕಿದೆ.
CHAMPIONS #TeamIndia #INDvNZ @Paytm pic.twitter.com/UI5askB5y4
— BCCI (@BCCI) November 21, 2021
ಯುವ ಆಟಗಾರರ ಮೇಲೆ ನಂಬಿಕೆ ಇಡಬೇಕು..
ಯಂಗ್ಸ್ಟರ್ಗಳಿಗೆ ತಂಡದಲ್ಲಿ ಹೆಚ್ಚೆಚ್ಚು ಅವಕಾಶ ನೀಡಬೇಕು. ಅವರ ಮೇಲೆ ನಂಬಿಕೆ ಕೂಡ ಇಡಬೇಕು. ಆಗ ಯುವ ಆಟಗಾರರ ಕಾನ್ಫಿಡೆನ್ಸ್ ಲೆವೆಲ್ ಹೆಚ್ಚುವುದರಲ್ಲದೇ, ಉತ್ತಮ ಪರ್ಫಾಮೆನ್ಸ್ ನೀಡಲು ಸಾಧ್ಯವಾಗುತ್ತದೆ.
ಸ್ಟಾರ್ ಆಟಗಾರರ ಮೇಲೆಯೇ ಅವಲಂಬಿತವಾಗಬಾರದು..
ಸ್ಟಾರ್ ಪ್ಲೇಯರ್ಗಳ ಮೇಲೆ ಡಿಪೆಂಡ್ ಆಗಬಾರದು ಅನ್ನೋದಕ್ಕೆ ಉತ್ತಮ ಉದಾಹರಣೆ ಈ ಸರಣಿ. ಕೊಹ್ಲಿ, ಜಡೇಜಾ ಶಮಿ, ಬೂಮ್ರಾ, ಹಾರ್ದಿಕ್ ಸೇರಿ ಹಲವರು ಅಲಭ್ಯರಾಗಿದ್ರು. ಇದರ ನಡುವೆಯೂ ಭಾರತ 3-0 ಅಂತರದಲ್ಲಿ ಸರಣಿ ಗೆದ್ದಿದೆ. ಹಾಗಾಗಿ ಗೆಲುವಿಗೆ ಸ್ಟಾರ್ಗಳನ್ನೇ ಅವಲಂಬಿಸಬಾರದು. ಇದು ತಂಡದ ಹಿನ್ನಡೆಗೆ ಕಾರಣವಾಗುತ್ತೆ.
T20I series sweep ✅
Over to the Test series, with smiles & some celebrations 😊
Here's what #TeamIndia Head Coach Rahul Dravid has to say. #INDvNZ @Paytm pic.twitter.com/5s4nvQURk8
— BCCI (@BCCI) November 21, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post