ಐಸಿಸಿ ನೂತನ ಟಿ20 ಱಂಕಿಂಗ್ ಪಟ್ಟಿ ಪ್ರಕಟಗೊಂಡಿದ್ದು, ವಿರಾಟ್ ಕೊಹ್ಲಿ ಟಾಪ್- 10ರಿಂದ ಹೊರ ಬಿದ್ದಿದ್ದಾರೆ. ಇನ್ನು ಕಿವೀಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಕೆ.ಎಲ್.ರಾಹುಲ್ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಪ್ರಸ್ತುತ ಅವರು 5ನೇ ಸ್ಥಾನದಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್ ಕೂಡ 24 ಸ್ಥಾನ ಜಿಗಿತ ಕಂಡಿದ್ದು, 59ನೇ ಱಂಕ್ನಲ್ಲಿ ಕಾಣಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್, 5ರಿಂದ 4ನೇ ಜಿಗಿತ ಕಂಡಿದ್ದಾರೆ.
ಇನ್ನು ಕಿವೀಸ್ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಟಾಪ್ 10ರಿಂದ ಹೊರ ಬಿದ್ದಿದ್ದಾರೆ. ಈ ಮೊದಲು 8ನೇ ಸ್ಥಾನದಲ್ಲಿದ್ದ ಕೊಹ್ಲಿ ಇದೀಗ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಿವೀಸ್ ಟಿ20 ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ರೋಹಿತ್ ಶರ್ಮಾ 2ಸ್ಥಾನ ಮೇಲೇರಿದ್ದು, 13ನೇ ಱಂಕ್ನಲ್ಲಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಂ ಮೊದಲ ಸ್ಥಾನದಲ್ಲೇ ಮುಂದುವರಿದಿದ್ರೆ, ಇಂಗ್ಲೆಂಡ್ ಡೇವಿಡ್ ಮಲಾನ್, ಆ್ಯಡಂ ಮಾರ್ಕಕ್ರಮ್ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಮಿಚೆಲ್ ಸ್ಯಾಂಟ್ನರ್ 10 ಸ್ಥಾನ ಏರಿಕೆ ಕಂಡು 13ಕ್ಕೆ, ಭುವನೇಶ್ವರ್ ಕುಮಾರ್ 5 ಸ್ಥಾನ ಏರಿಕೆ ಕಂಡು 19ನೇ ಸ್ಥಾನ ಮತ್ತು ದೀಪಕ್ ಚಹಾರ್ 19 ಸ್ಥಾನ ಮೇಲೇರಿ 44ನೇ ಸ್ಥಾನ ಪಡೆದುಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post