ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಬಿಗ್ ಬಾಸ್ ಹೋಗಿ ಬಂದ ಮೇಲೆ ಮದ್ವೆ ಆಗ್ತಾರೆ. ಮದ್ವೆ ಆದ್ಮೆಲೆ ಅವ್ರು ಚಿತ್ರರಂಗ ದಿಂದ ದೂರ ಉಳಿತಾರೆ ಅನ್ನೋ ಗಾಸಿಪ್ ಗಾಂಧಿ ನಗರದಲ್ಲಿ ಹುಟ್ಟಿಕೊಂಡಿತ್ತು. ಅದ್ರೆ ಈ ಗಾಸಿಪ್ಗಳಿಗೆ ಕ್ಯಾರೆ ಅನ್ನದ ಶುಭಾ ಪೂಂಜಾ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತ್ರ ಸದ್ದಿಲ್ಲದೆ ‘ಅಂಬುಜ’ ಅವತಾರದಲ್ಲಿ ಕಾಣಿಸಿದ್ದಾರೆ. ಮದ್ವೆ ಗಿದ್ವೆ ಅಂತಿದ್ದ ಶುಭಾ ಪೂಂಜಾ ಸಡನ್ ಆಗಿ ಹೊಸ ಅವತಾರದಲ್ಲಿ ಕಾಣಿಸಿದ್ದಾರೆ..ಅಷ್ಟಕ್ಕು ಶುಭ ಹೊಸ ಅವತಾರಕ್ಕೆ ಕಾರಣ ಏನು..?
ಬಿಗ್ ಬಾಸ್ ಸೀಸನ್ 8 ನಲ್ಲಿ ಸ್ಪರ್ಧಿಯಾಗಿ ಕ್ಯಾಮೆರಾ ಅರಮನೆ ಸೇರಿದ್ದ ಶುಭಾ ಪೂಂಜಾ, ಮನೆಯಿಂದ ಹೊರ ಬರುವಷ್ಟರಲ್ಲಿ ಕೊಂಚ ತೆಳ್ಳಗಾಗಿದ್ರು.. ಶುಭಾ ಪೂಂಜಾ ಸ್ಲಿಮ್ ಆಗಿದ್ದನ್ನು ನೋಡಿ ಮದುವೆಗೆ ತಯಾರಾಗ್ತಿದ್ದಾರೆ ಅಂತ ಮಾತನಾಡಿದ್ದ ಮಂದಿಯೇ ಜಾಸ್ತಿ. ಅದ್ರೆ ಮದ್ವೆ ಬಗ್ಗೆ ಮಾತನಾಡದೆ ಸೈಲೆಂಟ್ ಆಗಿದ್ದ ಶುಭಾ ಮತ್ತೆ ಸಿನಿಮಾ ಕೆಲಸದ ಕಡೆ ಮುಖ ಮಾಡಿದ್ದಾರೆ. ಅಲ್ಲದೆ ಸದ್ದಿಲ್ಲದೆ ಶುಭಾ ಪೂಂಜಾ ‘ಅಂಬುಜ’ ಅವತಾರದಲ್ಲಿ ಕಾಣಿಸಿದ್ದಾರೆ.
ಯೆಸ್..ಬಿಗ್ ಬಾಸ್ ನಿಂದ ಹೊರ ಬಂದ ನಂತ್ರ ಫ್ಯಾಮಿಲಿ ಜೊತೆ ಒಂದಷ್ಟು ದಿವಸ ಕಾಲ ಕಳೆದ ಶುಭಾ ಪೂಂಜಾ. ಮತ್ತೆ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ಅಲ್ಲದೆ ಬಿಗ್ ಬಾಸ್ ಗೂ ಹೋಗೋಕು ಮುನ್ನ ಕಮಿಟ್ ಆಗಿದ್ದ ”ಅಂಬುಜ’ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ ಶುಭಾ ಪೂಂಜಾ. ಕೊರೊನ ಲಾಕ್ ಡೌನ್ ‘ಅಪ್ಪು’ ಅಗಲಿಕೆ ನಂತ್ರ ನೋವಲ್ಲು ಶುಭಾ ಪೂಂಜಾ ‘ಅಂಬುಜ’ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಸದ್ದಿಲ್ಲದೆ ‘ಅಂಬುಜ’ ಚಿತ್ರದ ಮೊದಲ ಶೆಡ್ಯೂಲ್ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ.
‘ಅಂಬುಜ’ ಚಿತ್ರಕ್ಕಾಗಿ ಶುಭಾ ಪೂಂಜಾ ಬರೋಬರಿ 20 kg ತೂಕ ಕಡಿಮೆಯಾಗಿದ್ದಾರೆ. ಚಿತ್ರದಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಶುಭಾ ಪೂಂಜಾ ಕಾಣಿಸಲಿದ್ದಾರೆ. ಅಲ್ಲದೆ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ಶುಭಾ ಪೂಂಜಾ ಕಾಣಿಸಲಿದ್ದು, ಲಂಬಾಣಿ ಹುಡಿಗಿಯ ಅವತಾರದಲ್ಲಿ ಶುಭಾ ಈ ಚಿತ್ರದಲ್ಲಿ ಕಾಣಿಸ್ತಾರೆ. ಇದಲ್ಲದೆ ‘ಅಂಬುಜ’ ಚಿತ್ರದಲ್ಲಿ ‘ಅಮೃತ ವರ್ಷಿಣಿ’ ಸೀರಿಯಲ್ ಖ್ಯಾತಿಯ ರಜನಿ ಕೂಡ ಬಣ್ಣ ಹಚ್ಚಲಿದ್ದು, ರಜನಿ ಕೂಡ ಚಿತ್ರದಲ್ಲಿ ಲಂಬಾಣಿ ಹುಡುಗಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಲ್ಲದೆ ರಜನಿ ಕೂಡ ಮೊದಲ ಶೆಡ್ಯೂಲ್ ನಲ್ಲಿ ಭಾಗಿಯಾಗಿ ಲಂಬಾಣಿ ಹುಡುಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೊತೆಗೆ ‘ಅಂಬುಜ’ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಡೊಕೆ ಸಿದ್ದರಾಗಿದ್ದಾರೆ.
ಸೈಕಾಲಜಿಕಲ್ ಥ್ರಿಲ್ಲರ್ ಆಗಿರುವ ‘ಅಂಬುಜ’ ಚಿತ್ರ ನವೆಂಬರ್ 8 ರಿಂದ 10 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರು ಹಾಗೂ ಗದಗದಲ್ಲಿ ಮುಗಿಸಿದೆ. ಇನ್ನು ಎರಡನೇ ಹಂತದ ಚಿತ್ರೀಕರಣ ನವೆಂಬರ್ 30ರಿಂದ ಶುರುವಾಗಲಿದೆ.
ಇನ್ನು ‘ಅಂಬುಜ’ ಚಿತ್ರವನ್ನು ಈ ಹಿಂದೆ ‘ಕೆಲವು ದಿನಗಳ ನಂತರ’ ಚಿತ್ರ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಶ್ರೀನಿ ನಿರ್ದೇಶನ ಮಾಡ್ತಿದ್ದು, ಚಿತ್ರದಲ್ಲಿ ಶುಭಾ ಪೂಂಜಾ, ಕಾಮಿಡಿ ಕಿಲಾಡಿ ಗೋವಿಂದೇ ಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪದ್ಮಜಾರಾವ್, ದೀಪಕ್ ಸುಬ್ರಮಣ್ಯ, ಜಗದೀಶ್ ಹಲ್ಕುಡೆ ಬೇಬಿ ಆಕಾಂಕ್ಷ, ಹಾಗೂ ಸಂದೇಶ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಕಾಶೀನಾಥ್ ಮಡಿವಾಳರ್ ಅವರು ಕಥೆಯನ್ನು ಬರೆಯುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post