ಮಾರಕ ಕೊರೋನಾದಿಂದ ಬಳಲುತ್ತಿರುವ ಟಾಲಿವುಡ್ ಖ್ಯಾತ ಕೊರಿಯೋಗ್ರಾಫರ್ ಮತ್ತು ನಟ ಶಿವಶಂಕರ್ ಮಾಸ್ಟರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರೊಂದಿಗೆ ಧರ್ಮಪತ್ನಿ ಮತ್ತು ಅವರ ದೊಡ್ಡ ಮಗನಿಗೂ ಕೋವಿಡ್ ಪಾಸಿಟಿವ್ ಆಗಿ ಹೋಮ್ ಕ್ವಾರೈಂಟೀನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಶಿವಶಂಕರ್ ಮಾಸ್ಟರ್ ಸ್ಥತಿ ಚಿಂತಾಜನಕಾವಾಗಿದ್ದು, ಚಿಕಿತ್ಸೆಗಾಗಿ ಪ್ರತಿದಿನ ಒಂದು ಲಕ್ಷ ಹಣಬೇಕಾಗಿದೆ. ಹಾಗಾಗಿ ತೆಲುಗು ಚಿತ್ರರಂಗ ಅಥವಾ ಯಾರಾದರೂ ಹಣ ಸಹಾಯ ಮಾಡಿ ಎಂದು ಶಿವಶಂಕರ್ ಮಾಸ್ಟರ್ ಕೊನೆ ಮಗ ಕೇಳಿಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ರಿಯಲ್ ಹೀರೋ ಸೋನು ಸೂದ್ ಶಿವಶಂಕರ್ ಮಾಸ್ಟರ್ ನೆರವಿಗೆ ಬಂದಿದ್ದಾರೆ. ತನ್ನ ಸೋಷಿಯಲ್ ಮೀಡಿಯಾದಲ್ಲಿ ಶಿವಶಂಕರ್ ಮಾಸ್ಟರ್ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಘೋಷಿಸಿದ್ದಾರೆ.
Iam already in touch with the family,
Will try my best to save his life 🙏 https://t.co/ZRdx7roPOl— sonu sood (@SonuSood) November 25, 2021
ಅವರು ಹಸಿದ ಹೊಟ್ಟೆಗಳಿಗೆ ಅನ್ನ ನೀಡಿದವರು. ಅನಾರೋಗ್ಯದಿಂದ ಬಳಲಿದ್ದ ಅನೇಕರ ಪಾಲಿಗೆ ಆಶಾಕಿರಣವಾಗಿದ್ದವರು ಸೋನು ಸೂದ್. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಜನರ ಸಹಾಯ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಹೀರೋ ಆಗಿ ಗುರುತಿಸಿಕೊಂಡವರು. ದಟ್ ಇಸ್ ಸೋನು ಸೂದ್. ಸೋನು ಸಿನಿಮಾಗಳಿಗಿಂತಲೂ ಸಮಾಜ ಸೇವೆಯ ಮೂಲಕವೇ ಅಭಿಮಾನಿ ಜಗತ್ತನ್ನ ಸಂಪಾದಿಸಿದ್ದಾರೆ. ಕೆಲವೊಂದು ಸೆಲೆಬ್ರಿಟಿಗಳು ಅಂದ್ರೆ ಹಾಗೆ.. ಪರದೆಯ ಮೇಲೆ ಮಾಡುವ ನಟನೆಗೂ ನಿಜ ಜೀವನದಲ್ಲಿ ಮಾಡುವ ಕಾರ್ಯಕ್ಕೂ ಸಂಬಂಧವೇ ಇರಲ್ಲ. ಇಂತವರ ಲಿಸ್ಟ್ ನಲ್ಲಿ ಕೋವಿಡ್ ಪ್ಯಾಂಡಮಿಕ್ನಲ್ಲಿ ಮುನ್ನೆಲೆಗೆ ಬಂದಿರುವ ಹೆಸರೇ ಸೋನು ಸೂದ್ರದ್ದು.
ಇದನ್ನೂ ಓದಿ: ತೆಲುಗು ನಟನ ಆರೋಗ್ಯ ಗಂಭೀರ; ದಿನಕ್ಕೆ 1 ಲಕ್ಷ ಖರ್ಚು..ಸಹಾಯ ಮಾಡಿ ಎಂದ ಕುಟುಂಬ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post