ಬೆಂಗಳೂರು: ನಗರದಲ್ಲಿ ಹಲವು ಕಡೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿದೆ ಎಂದು ನ್ಯೂಸ್ಫಸ್ಟ್ಗೆ ಭೂವಿಜ್ಞಾನಿ H.S.M.ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಮೊದಲು ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ಬಂತು. ಅಂತಿಮವಾಗಿ 2.6 ರಿಕ್ಟರ್ ಮಾಪಕ ದಾಖಲಾಗಿದೆ. ಭೂಮಿಯ 10 ಕಿ.ಮೀ. ಆಳದಲ್ಲಿ ಆಗಿರುವುದು ನಿಜ. ಆಂಧ್ರ, ಮಹಾರಾಷ್ಟ್ರ, ಗುಜರಾತ್ನಲ್ಲಿ ಕಂಪನವಾಗಿದೆ. ಭೂಕಂಪನಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅಧ್ಯಯನಗಳು ಆಗಬೇಕಿದೆ ಎಂದಿದ್ದಾರೆ.
ಕಳೆದ ವರ್ಷ ಪಾಂಡವಪುರದಲ್ಲಿ ಶಬ್ದ ಕೇಳಿ ಬಂದಿತ್ತು. ಭೂಕಂಪನದ ಬಗ್ಗೆ ಜನ ಆತಂಕ ಪಡುವುದು ಬೇಡ ಎಂದು ಭೂವಿಜ್ಞಾನಿ ಪ್ರಕಾಶ್ ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post