ನಟಿ ಸಮಂತಾ ಮತ್ತು ನಾಗಚೈತನ್ಯ ಟಾಲಿವುಡ್ನ ಫೇವರೀಟ್ ಜೋಡಿ. ಈ ಇಬ್ಬರು ಒಟ್ಟಿಗೆ ನಟಿಸಿದ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್. ಸಮಂತಾ ಮತ್ತು ನಾಗಚೈತನ್ಯ ಮದುವೆ ಆಗುವಾದ ಫ್ಯಾನ್ಸ್ ಎಷ್ಟು ಖುಷಿಪಟ್ಟರೋ, ಡಿವೋರ್ಸ್ ಅನೌನ್ಸ್ ಮಾಡಿದಾಗಲೂ ಅಷ್ಟೇ ಬೇಸರಪಟ್ಟರು. ಇಬ್ಬರ ಡಿವೋರ್ಸ್ ಬಳಿಕ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆ ಮತ್ತೊಂದು ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ನಾಗಚೈತನ್ಯ ಮೊದಲು ಮದುವೆ ಆಗಲು ಬಯಸಿದ್ದು ಸಮಂತಾನಲ್ಲ, ಬದಲಿಗೆ ಶೃತಿ ಹಾಸನ್ ಎನ್ನಲಾಗಿದೆ.
2013ರಲ್ಲಿ ನಾಗಚೈತನ್ಯ ಹಾಗೂ ಶೃತಿ ಹಾಸನ್ ಇಬ್ಬರು ಭೇಟಿಯಾಗಿದ್ದರು. ಬಳಿಕ ಸ್ನೇಹಿತರಾಗಿ ಇಬ್ಬರು ಡೇಟಿಂಗ್ ಮಾಡಲು ಶುರು ಮಾಡಿದರು. ಅದಾದ ನಂತರ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಎಷ್ಟರಮಟ್ಟಿಗೆ ಎಂದರೆ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಲೇ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಇದಾದ ಬಳಿಕ ಇನ್ನೇನು ನಾಗಚೈತನ್ಯ ಹಾಗೂ ಶೃತಿ ಹಾಸನ್ ಇಬ್ಬರು ಮದುವೆ ಆಗಲಿದ್ದಾರೆ ಅಂತಿತ್ತು. ಕೊನೆಗೂ ಯಾವುದೋ ಕಾರಣಕ್ಕೆ ನಾಗಚೈತನ್ಯ ಮತ್ತು ಶೃತಿ ಹಾಸನ್ ಲವ್ ಸ್ಟೋರಿ ಮುರಿದು ಬಿದ್ದಿತ್ತು.
ಡಿವೋರ್ಸ್ ನಂತರ ನಾಗಚೈತನ್ಯ ಬಂಗಾರರಾಜು, ಥ್ಯಾಂಕ್ ಯು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದು ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post