ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 296 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 49 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಪಂದ್ಯದ ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಅಮೋಘ ಪ್ರದರ್ಶನ ನೀಡಿತು. ಆರಂಭಿಕ ಸೆಷನ್ನಲ್ಲೇ ವಿಲ್ ಯಂಗ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಕಬಳಿಸುವಲ್ಲಿ ತಂಡ ಯಶಸ್ಸಿಯಾಗಿತ್ತು. ನಂತರದ ಎರಡನೇ ಸೆಷನ್ನಲ್ಲಿ ಕಿವೀಸ್ ಪಡೆ ಅಕ್ಷರ್ ಪಟೇಲ್ ದಾಳಿಯ ಮುಂದೆ ಮಂಕಾಯ್ತು. ತಂಡದ ಭರವಸೆಯ ಆಟಗಾರರಾಗಿದ್ದ ರಾಸ್ ಟೇಲರ್, ಹೆನ್ರಿ ನಿಕೋಲಸ್ರನ್ನ ಅಲ್ಪ ಮೊತ್ತಕ್ಕೆ ಔಟ್ ಮಾಡುವಲ್ಲಿ ಅಕ್ಷರ್ ಯಶಸ್ವಿಯಾದ್ರು.
ಜೊತೆಗೆ 95 ರನ್ಗಳಿಸಿ ಶತಕದತ್ತ ಹೆಜ್ಜೆ ಇರಿಸಿದ್ದ ಆರಂಭಿಕ ಆಟಗಾರ ಟಾಮ್ ಲಾಥಮ್ಗೂ ಅಕ್ಷರ್ ಪಟೇಲ್ ಪೆವಿಲಿಯನ್ ದಾರಿ ತೋರಿಸಿದ್ರು. 13 ರನ್ಗಳಿಸಿ ರಚಿನ್ ರವೀಂದ್ರ ಔಟಾದ್ರೆ, ಸೌಥಿ, ಸೋಮರ್ವಿಲ್ಲಿ ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದ್ರು. ಅಂತಿಮವಾಗಿ ಪ್ರವಾಸಿ ಪಡೆ 296 ರನ್ಗಳಿಗೆ ಆಲೌಟ್ ಆಯ್ತು.
ಭಾರತದ ಪರ ಅಕ್ಷರ್ ಪಟೇಲ್ 5, ಅಶ್ವಿನ್ 3, ಜಡೇಜಾ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಕಬಳಿಸಿದ್ರು.
Innings Break!
Ashwin picks up the final wicket as New Zealand are all out for 296. #TeamIndia lead by 49 runs.
Scorecard – https://t.co/WRsJCUhS2d #INDvNZ @Paytm pic.twitter.com/GDBqhNP0u1
— BCCI (@BCCI) November 27, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post