ಎರಡನೇ ಲಾಕ್ ಡೌನ್ ಮುಗಿದು ನಂತರ ಸಿನಿಮಾಗಳ ಹಬ್ಬ ಸ್ಯಾಂಡಲ್ವುಡ್ನಲ್ಲಿ ಶುರುವಾಗಿದೆ. ಎರಡು ವರ್ಷದಿಂದ ಶೂಟಿಂಗ್ ಸ್ಪಾಟ್ನಲ್ಲಿ ಕಾಲ ಕಳೆದು ಟೀಸರ್ನಿಂದ ಗತ್ತು ಗಮ್ಮತ್ತನ್ನ ತೋರಿದ ಅವತಾರ ಪುರುಷ ಕೊನೆಗೂ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದ್ದಾರೆ.
ನಟ ಶರಣ್ ಸಹ ನಟನಾಗಿ ಕಾಮಿಡಿ ಕಚಗುಳಿ ಇಡ್ತಿದ್ದವರು ಱಂಬೋ ಚಿತ್ರದಿಂದ ಫುಲ್ ಟೈಮ್ ಹೀರೋ ಆಗಿ ಕಾಮಿಡಿ ಕಿಕ್ ಅನ್ನ ಕನ್ನಡಿಗರಿಗೆ ನೀಡ್ತಿದ್ದಾರೆ. ಆ್ಯಕ್ಟಿಂಗು, ಸಿಂಗಿಂಗು, ಡ್ಯಾನ್ಸಿಂಗ್ನಂತ ಸಿನಿಮಾದ ಎಲ್ಲಾ ವಿಂಗ್ಗಳಲ್ಲೂ ಹೀ ಈಸ್ ಫರ್ಫೆಕ್ಟ್. ಇಂತಹ ರಂಗಭೂಮಿಯ ಪ್ರತಿಭೆ ಅಭಿನಯ ಮಾಡಿರುವ ನಿರೀಕ್ಷಿತ ಸಿನಿಮಾಗಳಲ್ಲೊಂದು ಅವತಾರ ಪುರುಷ.
ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಅವತಾರ ಪುರುಷ ಆಗಿ ಪ್ರೇಕ್ಷಕರನ್ನ ರಂಜಿಸಲಿದ್ದಾರೆ ಸ್ಯಾಂಡಲ್ವುಡ್ ಅಧ್ಯಕ್ಷ. ಇನ್ನು ಇದೇ ಡಿಸೆಂಬರ್ 10 ರಂದು ಈ ಸಿನಿಮಾ ರಿಲೀಸ್ ಆಗಲಿದ್ದು ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ನಾಳೆ ಚಿತ್ರದ ಇನ್ನೊಂದು ಹಾಡು ರಿಲೀಸ್ ಆಗಲಿದ್ದು ವಿಭಿನ್ನವಾದ ಪ್ರಚಾರ ತಂತ್ರಕ್ಕೆ ಚಿತ್ರತಂಡ ಮೊರೆ ಹೋಗಿದೆ. ಜಾಹೀರಾತಿನ ಕಲ್ಪನೆಯಲ್ಲಿ ಒಂದು ಚಿಕ್ಕ ವಿಡಿಯೋವನ್ನು ರಿಲೀಸ್ಗಾಗಿ ಸುನಿ ಟೀಂ ರೆಡಿ ಮಾಡಿ ಹರಿಬಿಟ್ಟಿದೆ. ಇದನ್ನ ಕಂಡ ಪ್ರೇಕ್ಷಕ ಮಹಾಪ್ರಭು ಅವತಾರ ಪುರುಷನ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post