ಮೊನ್ನೆಯಿಂದ ಉತ್ತರಪ್ರದೇಶದ ಕಾನ್ಪುರ್ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಟೆಸ್ಟ್ ಮ್ಯಾಚ್ ಆರಂಭವಾಗಿದೆ.ಪಂದ್ಯದ ವೇಳೆ ಆಟಗಾರರು ಮೈದಾನದಲ್ಲಿ ಬೆವರು ಹರಿಸಿ ಆಟ ಆಡುತ್ತಿದ್ದರೆ ಓರ್ವ ವ್ಯಕ್ತಿ ಬಾಯಲ್ಲಿ ಅದೆನೋ ಅಗಿಯುತ್ತಾ, ಮೊಬೈಲ್ನಲ್ಲಿ ಮಾತನಾಡುತ್ತಾ ಸೀಟ್ನ ಮೇಲೆ ವಿರಾಜಮಾನವಾಗಿ ಕೂತಿದ್ದ. ಅದ್ಯಾವ ಕ್ಷಣದಲ್ಲಿ ಕಾಮೆರಾಮನ್ ಕಣ್ಣು ಈತನ ಮೇಲೆ ಬಿದ್ದಿತೋ ಗೊತ್ತಿಲ್ಲ. ಪರಿಣಾಮ ಅರೆಕ್ಷಣದಲ್ಲಿ ಆತ ವಿಶ್ವವಿಖ್ಯಾತಿಯಾಗಿಬಿಟ್ಟಿದ್ದ!
ಹೌದು.. ಆ ವ್ಯಕ್ತಿಯ ಹೆಸರು ಶೋಭೀತ್ ಅಂತಾ.. ಕಾನ್ಪುರದ ಸರ್ವೋದಯ ನಗರದ ನಿವಾಸಿಯಾದ ಅವರ ಆ ಯುನಿಕ್ ಸ್ಟೈಲ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದ್ದವು. ಟ್ರೋಲ್ ಪೇಜ್ಗಳಲ್ಲಿ ಈತನ ಮೀಮ್ಸ್ಗಳು ತುಂಬಿ ತುಳುಕುತ್ತಿದ್ದವು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಸದೊಂದು ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
'मेरे मुंह में मीठी सुपारी थी। मसाला एकदम आसपास नहीं था'..
कुछ गलत हुआ हो तो I am sorry..
लेकिन मेरे बगल में मेरी बहन थी, जिसको लेकर कुछ लोगों गन्दे कमेंट किये, वो बुरा लगा.
शोभित पांडेय कानपुर वाले…#IndiaVsNewZealand #KanpurTest pic.twitter.com/6ewfNg55PG
— Suraj Shukla (@suraj_livee) November 26, 2021
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿದ ಅವರು. ನಾನು ನನ್ನ ಸಹೋದರಿ ಜೊತೆ ಪಂದ್ಯ ವೀಕ್ಷಿಸಲು ಆಗಮಿಸಿದ್ದೆ. ಆಗ ನಾನು ಬಾಯಲ್ಲಿ ಸಿಹಿ ಅಡಿಕೆಯನ್ನ ಅಗಿಯುವಾಗ ಕ್ಯಾಮೆರಾ ನನ್ನ ಬಳಿ ಪ್ಯಾನಿಂಗ್ ಆಯಿತು. ಈ ವೇಳೆ ನಾನು ಗುಟ್ಕಾ ಅಗಿಯುತ್ತಿದ್ದೆ ಎಂದು ಕೆಲವರು ತಪ್ಪಾಗಿ ಭಾವಿಸಿಕೊಂಡು ಟ್ರೋಲ್ ಮಾಡಿದರು. ಆದರೆ ನಾನು ಅಗಿಯುತ್ತಿದ್ದು ಸ್ವೀಟ್ ಸುಪಾರಿ (ಸಿಹಿ ಅಡಿಕೆ) ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ನನಗೆ ಗುಟ್ಕಾ ತಿನ್ನುವ ಅಭ್ಯಾಸವಿಲ್ಲ ಎಂದು ಅವರು ಹೇಳಿದ್ದಾರೆ.
ಜೊತೆಗೆ ಕೆಲವೊಬ್ಬರು ನನ್ನ ಪಕ್ಕ ಕುಳಿತಿದ್ದ ನನ್ನ ಸಹೋದರಿಯ ಕುರಿತು ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ಒಬ್ಬ ಹುಡುಗಿ ಪಕ್ಕದಲ್ಲಿ ಕುಳಿತರೆ ಅವರು ನಮ್ಮ ತಂಗಿ, ಅಕ್ಕ ಅಥವಾ ಮಗಳಾಗಿರಬಹುದು ಆದ್ರೆ ಸಾಕಷ್ಟು ಜನರು ಅಪಾರ್ಥ ಮಾಡಿಕೊಂಡು ಕೀಳ ಭಾಷೆಯಲ್ಲಿ ಕಮೆಂಟ್ ಮಾಡಿದ್ದಾರೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
#INDvNZ #KanpurTest 🥰❤ pic.twitter.com/ihitYJv0As
— Rajneesh 🇮🇳 (@Rajneesh_16) November 25, 2021
ಇದನ್ನೂ ಓದಿ:INDvsNZ ಮ್ಯಾಚ್ನಲ್ಲಿ ಇವನದ್ದೇ ಮಾತು; ಈ ಗುಟ್ಕಾ ಭಾಯ್ swagಗೆ ಕ್ರಿಕೆಟರ್ ಫಿದಾ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post