ಬಾಲಿವುಡ್ ಹಾಟ್ ಜೋಡಿ ಅಂತಲೇ ನಾಮಾಂಕಿತರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಸದ್ಯ ದಾಂಪತ್ಯ ಜೀವನಕ್ಕೆ ಬಲಗಾಲಿಡಲು ಸಿದ್ಧರಾಗಿದ್ದರೆ. ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಕ್ಕಿ ಕೌಶಲ್ ಆ್ಯಂಡ್ ಕತ್ರಿನಾ ದಾಂಪತ್ಯ ಜೀವನ ಆರಂಭಿಸಲು ಕಾಯುತ್ತಿದ್ದಾರೆ.
ಮಾಹಿತಿಗಳ ಪ್ರಕಾರ, ಡಿಸೆಂಬರ್ 7 ರಿಂದ 12ನೇ ತಾರೀಖಿನವರೆಗೂ ಅದ್ಧೂರಿಯಾಗಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ನಡೆಯಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಮದುವೆ ನಡೆಯಲಿದೆ. ಆದರೆ, ಈ ಬಗ್ಗೆ ವಿಕ್ಕಿ ಕೌಶಲ್ ಆಗಲಿ ಕತ್ರಿನಾ ಆಗಲಿ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.
ತಮ್ಮ ವಿವಾಹ ಮಹೋತ್ಸವಕ್ಕೆ ತೀರಾ ಆತ್ಮೀಯರಿಗಷ್ಟೇ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ನವ ವಧು-ವರರ ಗೆಸ್ಟ್ ಲಿಸ್ಟ್ನಲ್ಲಿ ಶಾರುಖ್ ಖಾನ್ ಹೆಸರೂ ಇದೆ. ಅಲ್ಲದೇ, ಶಾರುಖ್ ಖಾನ್ ಮೇಲೆ ವಿಕ್ಕಿ ಕೌಶಲ್‌ಗೆ ಅಪಾರ ಅಭಿಮಾನ ಇದೆ. ಹೀಗಾಗಿ, ತಮ್ಮ ಮದುವೆಗೆ ಶಾರುಖ್ ಖಾನ್ ಬರಬೇಕು ಎಂಬುದು ಅವರ ವಿಕ್ಕಿ ಆಸೆ. ಅತ್ತ ಶಾರುಖ್ ಖಾನ್ ಈಗೀಗಷ್ಟೇ ಕೊಂಚ ಫ್ರೀ ಆಗಿದ್ದಾರೆ. ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿ, ಶಾರುಖ್ ಖಾನ್ ತೀವ್ರ ಮುಜುಗರಕ್ಕೊಳಗಾಗಿದ್ದರು. ಆದರೆ ತಮ್ಮ ನೆಚ್ಚಿನ ಅಭಿಮಾನಿಗಾಗಿ ಮತ್ತು ಕೋ ಸ್ಟಾರ್ ಕತ್ರಿನಾಗಾಗಿ ಮದುವೆಗೆ ಬಂದರೂ ಅಚ್ಚರಿ ಪಡುವಂತಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post