ಕೊರೊನಾ ಸೋಂಕಿನ ನೂತನ ತಳಿಯ ಹಾವಳಿ ಹೆಚ್ಚಾದ ಕಾರಣ ದಕ್ಷಿಣ ಆಫ್ರಿಕಾದಲ್ಲಿ ಕ್ರೀಡಾ ಕ್ಷೇತ್ರ ಸ್ಥಗಿತಗೊಂಡಿದೆ. ನಿನ್ನೆ ನಡೆದ ದಕ್ಷಿಣ ಆಫ್ರಿಕಾ-ನೆದರ್ಲೆಂಡ್ಸ್ ನಡುವಿನ ಪಂದ್ಯವನ್ನ ಕೂಡ ಅರ್ಧಕ್ಕೆ ನಿಲ್ಲಿಸಲಾಯ್ತು. ಹೀಗಾಗಿ ಮುಂದಿನ ತಿಂಗಳು ಕೈಗೊಳ್ಳಬೇಕಿರುವ ಟೀಮ್ ಇಂಡಿಯಾ, ಪ್ರವಾಸ ಸ್ಥಗಿತಗೊಳ್ಳುತ್ತಾ ಅನ್ನೋ ಅನುಮಾನ ಮೂಡಿದೆ.
ಸೌತ್ ಆಫ್ರಿಕಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು. ನೆದರ್ಲೆಂಡ್ 2 ಓವರ್‌ಗಳಲ್ಲಿ 11 ರನ್ ಗಳಿಸಿದ್ದ ವೇಳೆ ಪಂದ್ಯವನ್ನ ನಿಲ್ಲಿಸಲಾಯಿತು. ಇನ್ನೆರಡು ದಿನಗಳಲ್ಲಿ ನೆದರ್ಲೆಂಡ್ ತವರಿಗೆ ಮರಳುವ ಸಾಧ್ಯತೆ ಇದೆ. ಉಭಯ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಬೇಕಿತ್ತು.
Cricket South Africa and @KNCBcricket are aware of news reports doing the rounds regarding the Netherlands tour to South Africa being cancelled or postponed. pic.twitter.com/j1AU73RVZ4
— Cricket South Africa (@OfficialCSA) November 26, 2021
ಇನ್ನು ಮುಂದಿನ ತಿಂಗಳು ಡಿಸೆಂಬರ್ 17ರಿಂದ ಟೀಮ್ ಇಂಡಿಯಾ-ಸೌತ್ ಆಫ್ರಿಕಾ ನಡುವೆ ಸರಣಿ ಆರಂಭವಾಗಲಿದೆ. ಆದರೆ ಬಯೋಬಬಲ್ ನಿಯಮಗಳ ಅನುಕರಣೆ ಸಲುವಾಗಿ ಡಿಸೆಂಬರ್ 8ರಂದೇ ಭಾರತ, ದಕ್ಷಿಣಾ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಬೇಕಿದೆ. ಆದರೆ ಕೊರೊನಾ ಹಾವಳಿ ಮಿತಿ ಮೀರಿದ ಪರಿಣಾಮ, ಜನಜೀವನ ಅಸ್ತವ್ಯಸ್ತಗೊಂಡಿದೆ. ಕ್ರೀಡೆ ಮಾತ್ರವಲ್ಲದೆ, ಉಳಿದ ಕ್ಷೇತ್ರಗಳ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿದೆ.
ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಮೂರು ಪಂದ್ಯಗಳ ಟೆಸ್ಟ್ ಸರಣಿ (ಡಿಸೆಂಬರ್ 17ರಿಂದ ಆರಂಭ), ಮೂರು ಪಂದ್ಯಗಳ ಏಕದಿನ ಸರಣಿ (ಜನವರಿ 11ರಿಂದ ಆರಂಭ), ನಾಲ್ಕು ಪಂದ್ಯಗಳ ಟಿ20 ಸರಣಿ (ಜನವರಿ 19ರಿಂದ ಶುರು) ನಡೆಯಬೇಕಿದೆ. ಕೊರೊನಾ ಸುನಾಮಿ ಹೆಚ್ಚಾದ್ದರಿಂದ ಉಭಯ ಕ್ರಿಕೆಟ್ ಮಂಡಳಿಗಳು ಯಾವ ನಿರ್ಧಾರಕ್ಕೆ ಬರುತ್ತವೆ ಅನ್ನೋದು ಕುತೂಹಲ ಮೂಡಿಸಿವೆ.
Both boards can confirm that following updated information, it is highly unlikely that the visiting team will be able to fly out of South Africa over the weekend.
The KNCB is reviewing all of its options, while prioritising the physical and mental well-being of its players.
— Cricket South Africa (@OfficialCSA) November 26, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post