ದಿನೇ ದಿನೇ ಸಾಕಷ್ಟು ಸುದ್ದಿಯಾಗುತ್ತಿರುವ RRR ಸಿನಿಮಾ ಅಭಿಮಾನಿಗಳ ಕತೂಹಲದ ಕಟ್ಟೆಯನ್ನು ಮತ್ತಷ್ಟು ಹೆಚ್ಚುಮಾಡುತ್ತಿದೆ. ನಿನ್ನೆ ತಾನೆ ”ಥ್ರಿಬಲ್ ಆರ್” ಸಿನಿಮಾದ ಜನನಿ ಹಾಡನ್ನು ಬಿಡುಗಡೆ ಮಾಡಿದ ”ಥ್ರಿಬಲ್ ಆರ್” ಸಿನಿಮಾ ತಂಡ ಎಲ್ಲರಿಂದಲೂ ಮೆಚ್ಚುಗೆಯ ಮಹಾಪೂರವನ್ನೇ ಪಡೆದಿತ್ತು. ಆದರೆ ಈಗ ಕೆಲ ಹಿರಿಯ ಸಿನಿಮಾ ವಿಶ್ಲೇಷಕರು ಜನನಿ ಹಾಡನ್ನು ಬೇರೊಂದು ಸಿನಿಮಾದ ಹಾಡಿಗೆ ಹೋಲಿಸಿದ್ದಾರೆ.
25 ವರ್ಷಗಳ ಹಿಂದೆ ರೋಬೋ ಶಂಕರ್ ನಿರ್ದೇಶನದಲ್ಲಿ, ಮತ್ತು ಕಮಲ್ ಹಾಸನ್ ಅಭಿನಯದಲ್ಲಿ ಮೂಡಿಬಂದ ಸೂಪರ್ ಹಿಟ್ ಸಿನಿಮಾ ”ಇಂಡಿಯನ್”. ಈ ಸಿನಿಮಾದಲ್ಲಿ ಒಂದು ಹಾಡಿದ್ದು ಆ ಹಾಡನ್ನು ನೋಡುತ್ತಿದ್ರೆ, ”ಥ್ರಿಬಲ್ ಆರ್” ನ ಜನನಿ ಹಾಡು ನೆನಪಾಗುತ್ತಿದೆ ಎಂದು ಹಲವರು ಹೇಳಿದ್ದಾರೆ. ”ಇಂಡಿಯನ್” ಸಿನಿಮಾದಲ್ಲಿ ಸೇತುಪತಿ ಮಾಡಿದ ಪಾತ್ರವವನ್ನು ಅಜಯ್ ದೇವಗನ್ ಮಾಡಿದ್ದು, ಸುಕನ್ಯ ಮಾಡಿದ್ದ ಪಾತ್ರವನ್ನು ಆಲಿಯಾ ಭಟ್ ಮಾಡಿದ್ದಾರೆ. ”ಇಂಡಿಯನ್” ಸಿನಿಮಾದಲ್ಲಿ ಸುಕನ್ಯ, ಕಮಲ್ ಹಾಸನ್ಗೆ ತಿಲಕ ಇಡುವ ಸೀನ್ ಇದ್ದು, ಅದೇ ಸೀನ್ ”ಆರ್ ಆರ್ ಅರ್” ನಲ್ಲೂ ಮುಂದುವರೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ಈ ಎಲ್ಲಾ ಜವಾಬ್ದಾರಿ ನಿರ್ದೇಶಕ ರಾಜಮೌಳಿ ಅವರದ್ದು. ಎರೆಡೂ ಸಿನಿಮಾಗಳೂ ದೇಶಕ್ಕೆ ಸಂಬಧಪಟ್ಟ ಸಿನಿಮಾಗಳೇ. ಆದರೆ ”ಇಂಡಿಯನ್” ಸಿನಿಮಾ ಸಂಪೂರ್ಣ ಕಮರ್ಷಿಯಲ್ ಸಿನಿಮಾ. ಆದರೆ ”ಥ್ರಿಬಲ್ ಆರ್” ಸಿನಿಮಾ ಫಿಕ್ಷನ್ ಸಿನಿಮಾ. ಹೀಗಾಗಿ ನಿರ್ದೇಶಕರಿಗೆ ಈ ರೀತಿಯ ಯೋಚನೆಗಳು ಬಂದಿರಹುದು ಅಂತಾರೆ ಕೆಲ ಸಿನಿಮಾ ವಿಮರ್ಷಕರು. ರಾಜಮೌಳಿ ಮಾಡೋ ಸಿನಿಮಾಗಳ ಸೀನ್ಗಳು ಗೊತ್ತಿಲ್ಲದ ಸಿನಿಮಾಗಳಿಂದ ಕಾಪಿ ಮಾಡುತ್ತಾರೆ. ಈ ಹಿಂದೆ ಬಾಹುಬಲಿ ಸಿನಿಮಾದಲ್ಲಿ ಸಾಕಷ್ಟು ಕನ್ನಡ ಸಿನಿಮಾಗಳಿಂದಲೇ ಪ್ರೇರೇಪಿತರಾಗಿ, ರಾಜ್ ಸಿನಿಮಾಗಳಿಂದಲೇ, ಸೀನ್ಗಳನ್ನ ಇಂದಿನ ಕಾಲಮಾನಕ್ಕೆ ತಕ್ಕಂತೆ ಅದ್ದೂರಿಯಾಗಿ ತೋರಿಸುವ ತಾಕತ್ತಿರುವ ನಿರ್ದೇಶಕ ಎಂದು ಹಲವರು ಅಂತಿದ್ದಾರೆ. ಏನೇ ಆದ್ರೂ ಪ್ರೇಕ್ಷಕರಿಗೆ ಬೇಕಾಗಿರುವುದು 3 ಗಂಟೆ ಎಂಟರ್ಟೈನ್ಮೆಂಟ್ ಅಷ್ಟೇ ಅಂತಾರೆ ಮತ್ತೆ ಕೆಲವರು..
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post