ಸ್ನೇಹಿತನ ಅಭಿಮಾನಿ ಕಷ್ಟ ಪರಿಹರಿಸಿದ್ದಾರೆ ಕಿಚ್ಚ ಸುದೀಪ್. ಅಪ್ಪು ಅಭಿಮಾನಿ ಕಷ್ಟ ಪರಿಹರಿಸಿದ ಕಿಚ್ಚ ಎಂದಿನಂತೆಯೇ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಅಪ್ಪು ಅಭಿಮಾನಿ ಬೆನಕ ಅಪ್ಪು ತಾಯಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ರು. ಅಮ್ಮನಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲದೆ ಬೆನಕ ಅಪ್ಪು ಕಷ್ಟದಲ್ಲಿದ್ದರು. ಪುನೀತ್ ರಾಜ್ಕುಮಾರ್ಗೆ ಬೆನಕ ಅಪ್ಪು ಆತ್ಮೀಯ ಅಭಿಮಾನಿ ಆಗಿದ್ರು.
ಬೆನಕ ಅಪ್ಪು ಕುಟುಂಬದ ಕಷ್ಟಕ್ಕೆ ಪುನೀತ್ ರಾಜ್ ಕುಮಾರ್ ಯಾವಾಗ್ಲು ಸಹಾಯ ಮಾಡುತ್ತಿದ್ರು. ಆದ್ರೆ ಈಗ ಪುನೀತ್ ಇಲ್ಲವಾಗಿದ್ದಾರೆ. ಈ ಸಮಯದಲ್ಲೇ ಬೆನಕ ಅಪ್ಪು ಅಮ್ಮನಿಗೆ ರಸ್ತೆ ಅಪಘಾತ ಆಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ರು. ಇದ್ರಿಂದ ಅಮ್ಮನ ಚಿಕಿತ್ಸೆಗೆ ಹಣ
ಇಲ್ಲದೆ ದಾರಿ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದರು ಬೆನಕ. ಕೊನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯನ್ನ ಸಂಪರ್ಕ ಮಾಡಿದ್ದರು ಬೆನಕ ಅಪ್ಪು.
ಇನ್ನು, ಪುನೀತ್ ಅಭಿಮಾನಿಗೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಸಹಾಯ ಮಾಡಿದೆ. ಬೆನಕ ಅಪ್ಪು ಅವರ ತಾಯಿ ಇರೋ ಆಸ್ಪತ್ರೆಗೆ ತೆರಳಿ ಅಪ್ಪು ಅಭಿಮಾನಿ ಅಮ್ಮನ ಸಂಪೂರ್ಣ ಚಿಕಿತ್ಸೆ ಹೊಣೆ ಹೊತ್ತಿದ್ದಾರೆ ಕಿಚ್ಚ ಸುದೀಪ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post