ಪ್ರೀತಿಯ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮೆಲ್ಲರನ್ನ ಅಗಲಿ ನಾಳೆಗೆ ಒಂದು ತಿಂಗಳ. ಅವರ ಅಗಲಿಕೆಯ ನೋವು ಇಂದಿಗೂ ಕಾಡುತ್ತಲೇ ಇದೆ. ದೇಶದ ಗಡಿಯಾಚೆಗಿರುವ ಕನ್ನಡಿಗರೂ ಕೂಡ ಅಪ್ಪು ಅವರನ್ನ ನೆನೆದು ವಿವಿಧ ಕಾರ್ಯಕ್ರಮಗಳನ್ನ ಮಾಡುತ್ತಿದ್ದಾರೆ.
ಅದರಂತೆ ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿ ಅಪ್ಪು ನಮನ ಕಾರ್ಯಕ್ರಮ ನಡೆಯಿತು. ಅಡಿಲೇಡ್ ಕನ್ನಡ ಸಂಘದಿಂದ ಪುನೀತ್ ನಮನ ಕಾರ್ಯಕ್ರಮ ಆಯೋಜನೆ ನಡೆಯಿತು. ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರೆಲ್ಲರೂ ಒಗ್ಗೂಡಿ ಕಾರ್ಯಕ್ರಮವನ್ನ ನಡೆಸಿದರು.
ಈ ಸಂದರ್ಭದಲ್ಲಿ ಅಪ್ಪು, ರಾಜಕುಮಾರ ಚಿತ್ರದ ಚಿತ್ರೀಕರಣಕ್ಕಾಗಿ ಮೇಲ್ಬರ್ನ್ಗೆ ತೆರಳಿದ್ದಾಗ ಅಲ್ಲಿನ ಕನ್ನಡಿಗರೆಲ್ಲರಿಗೂ ಔತಣಕೂಟ ಏರ್ಪಡಿಸಲಾಗಿತ್ತು. ಆ ಸಂದರ್ಭವನ್ನ ಅಲ್ಲಿನ ಕನ್ನಡಿಗರು ನೆನಪಿಸಿಕೊಂಡರು. ನಂತರ ಪುನೀತ್ ರಾಜ್ಕುಮಾರ್ ನಟಿಸಿರುವ ವಿವಿಧ ಚಿತ್ರಗಳ ಗೀತೆಗಳನ್ನ ಹಾಡುವ ಮೂಲಕ ಗೀತಾಂಜಲಿ ಅರ್ಪಣೆ ಮಾಡಿದರು. ಅಕ್ಟೋಬರ್ 29 ರಂದು ಸಂಭವಿಸಿದ್ದ ಹಠಾತ್ ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ನಿಧನರಾದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post