ಆ್ಯಕ್ಷನ್ ಥ್ರಿಲ್ಲರ್, ರೊಮ್ಯಾಟಿಕ್ ಡ್ರಾಮಾ, ಟ್ರ್ಯೂ ಲವ್ ಸ್ಟೋರಿ ಸಿನಿಮಾಗಳಿಗಿಂತ ಜಾಸ್ತಿ ಹಾರರ್ ಮಿಸ್ಟ್ರಿ ಥ್ರಿಲ್ಲರ್ ಸಿನಿಮಾಗಳಿಗೆ ಪ್ರೇಕ್ಷಕರ ಒಲವು ಹೆಚ್ಚು. ಈ ಒಂದು ಧೈರ್ಯದ ಮೇಲೆ ಒಂದು ವಿಭಿನ್ನ ಪರಿಕಲ್ಪನೆಯ ಮೂಲಕ ‘ಕಾನ್ಸೀಲಿಯಂ’ ಅನ್ನೊ ಹೊಸ ಹೊಸಬರ ಸಿನಿಮಾ ಸ್ಯಾಂಡಲ್ವುಡ್ ಪ್ರೇಕ್ಷಕರ ಮುಂದೆ ಬರಲಿದೆ.
ಕಾನ್ಸೀಲಿಯಂ ಚಿತ್ರ ಸೈನ್ಸ್ ಫಿಕ್ಷನ್ ಸೈಕಾಲಜಿಲ್ ಥ್ರಿಲ್ಲರ್ ಸಿನಿಮಾ. ಸಮರ್ಥ್, ಪ್ರೀಥಮ್, ಅರ್ಚನಾ ಲಕ್ಷ್ಮೀನಾರಾಯಣ ಸ್ವಾಮಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಸೀತಾರಾಮ ಶಾಸ್ತ್ರಿ ಪ್ರೊಡಕ್ಷನ್ನಡಿ ಸಮರ್ಥ್ ನಿರ್ದೇನದಲ್ಲಿ ಈ ಕಾನ್ಸೀಲಿಯಂ ಸಿನಿಮಾ ಮೂಡಿಬಂದಿದೆ.
2018ರಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಿತ್ತು. ರಾಜ್ಯದ ನಾನಾ ಭಾಗದಲ್ಲಿ ಶೂಟ್ ಮುಗಿಸಿಕೊಂಡು ಬರೋಬ್ಬರಿ ಎರಡುವರೆ ವರ್ಷ ಗ್ರಾಫಿಕ್ಸ್ ತಂತ್ರಜ್ಞಾನವನ್ನ ಚಿತ್ರಕ್ಕೆ ಅಳವಡಿಸಿಕೊಂಡು ಈಗ ಸಿನಿಮಾ ರಿಲೀಸ್ ಹೊಸ್ತಿಲಿನಲ್ಲಿ ನಿಂತಿದೆ. ದ್ವೈಪಯಾನ್ ಸಿಂಘ ಸಂಗೀತ ಸಂಯೋಜನೆಯಲ್ಲಿ ಸುದರ್ಶನ್ ಜೆ.ಕೆ ಕ್ಯಾಮೆರಾ ಕಲ್ಪನೆಯಲ್ಲಿ ಸಿನಿಮಾ ರೆಡಿಯಾಗಿದೆ. ಈಗಾಗಲೇ ಕಾನ್ಸೀಲಿಯಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರನ್ನ ಇಂಪ್ರೇಸ್ ಮಾಡ್ತಿದೆ.. ಈ ಹೊಸಬರ ಹೊಸ ಪ್ರಯತ್ನಕ್ಕೆ ಸಿರಿಗನ್ನಡ ಪ್ರೇಕ್ಷಕ ಪ್ರಭುಗಳು ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post