ನವದೆಹಲಿ: ಭಾರತದ ಗಡಿಯನ್ನು ದಾಟಿ ಬಂದಿದ್ದ ಓರ್ವ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಸಿಬ್ಬಂದಿ (ಬಿಎಸ್ಎಫ್) ಸೌಹಾರ್ದ ಸೂಚಕವಾಗಿ ಪಾಕಿಸ್ತಾನ ಆರ್ಮಿಗೆ ಹಸ್ತಾಂತರಿಸಿದರು.
ನವೆಂಬರ್ 26 ರಂದು ಪಾಕ್ ಪ್ರಜೆ ಗೊತ್ತಿಲ್ಲದಂತೆ ಪಾಕ್-ಭಾರತದ ಅಂತಾರಾಷ್ಷ್ರೀಯ ಗಡಿ ದಾಟಿ ಒಳಗೆ ಬಂದಿದ್ದರು. ಅವರನ್ನು ಗಮನಿಸಿದ ಬಿಎಸ್ಎಫ್ ಯೋಧರು ತಕ್ಷಣವೇ ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಆ ಬಳಿಕ ಮಾನವೀಯತೆಯ ಆಧಾರದ ಮೇಲೆ ನಿನ್ನೆ ಪಾಕಿಸ್ತಾನದ ಬಾರ್ಡರ್ ರೇಂಜರ್ಸ್ ಸಿಬ್ಬಂದಿಗೆ ಅವರನ್ನು ಹಸ್ತಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post