ತೆಲುಗು ಖ್ಯಾತ ಕೊರಿಯೋಗ್ರಾಫರ್ ಮತ್ತು ಹಿರಿಯ ನಟ ಶಿವಶಂಕರ್ ಮಾಸ್ಟರ್ ಅವರು ಮಾರಕ ಕೊರೋನಾಗೆ ಬಲಿಯಾಗಿದ್ದಾರೆ. ಇಂದು ಚಿಕಿತ್ಸೆ ಫಲಿಸದೆ ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಶಿವಶಂಕರ್ ಮಾಸ್ಟರ್ ಅವರಿಗೆ ಕೊವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಬಳಿಕ ಚಿಕಿತ್ಸೆಗಾಗಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೀಗ, ಆರೋಗ್ಯ ಚೇತರಿಸದೆ ಮೃತಪಟ್ಟಿದ್ದಾರೆ.
ಈ ಹಿಂದೆಯೇ ಶಿವಶಂಕರ್ ಮಾಸ್ಟರ್ ಸ್ಥತಿ ಚಿಂತಾಜನಕಾವಾಗಿತ್ತು. ಚಿಕಿತ್ಸೆಗಾಗಿ ಪ್ರತಿದಿನ ಒಂದು ಲಕ್ಷ ಹಣಬೇಕಾಗಿರುತ್ತಿತ್ತು. ಹಾಗಾಗಿ ತೆಲುಗು ಚಿತ್ರರಂಗ ಅಥವಾ ಯಾರಾದರೂ ಹಣ ಸಹಾಯ ಮಾಡಿ ಎಂದು ಶಿವಶಂಕರ್ ಮಾಸ್ಟರ್ ಕೊನೆ ಮಗ ಕೇಳಿಕೊಂಡಿದ್ದರು.
ಇದನ್ನೂ ಓದಿ: ನಟನ ಚಿಕಿತ್ಸೆಗಾಗಿ ಅಂಗಲಾಚಿದ ಕುಟುಂಬ; ಸಂಪೂರ್ಣ ವೆಚ್ಚ ಭರಿಸುತ್ತೇನೆ ಎಂದ ಸೋನು ಸೂದ್
ಈ ಸುದ್ದಿ ತಿಳಿಯುತ್ತಿದ್ದಂತೆಯೇ ರಿಯಲ್ ಹೀರೋ ಸೋನು ಸೂದ್ ಶಿವಶಂಕರ್ ಮಾಸ್ಟರ್ ನೆರವಿಗೆ ಬಂದರು. ತನ್ನ ಸೋಷಿಯಲ್ ಮೀಡಿಯಾದಲ್ಲಿ ಶಿವಶಂಕರ್ ಮಾಸ್ಟರ್ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಘೋಷಿಸಿದ್ದರು. ಅದರಂತೆಯೇ ಸಹಾಯವೂ ಮಾಡಿದರು. ಈಗ ಕಾಲ ಮೀರಿದ ಕಾರಣ ಕುಟುಂಬವನ್ನು ಅಗಲಿದ್ದಾರೆ.
Heartbroken to hear about the demise of Shiv Shankar masterji. Tried our best to save him but God had different plans. Will always miss you masterji.
May almighty give strength to the family to bear this loss.
Cinema will always miss u sir 💔 pic.twitter.com/YIIIEtcpvK— sonu sood (@SonuSood) November 28, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post