ಮುಂದಿನ ಆವೃತ್ತಿಯ ಐಪಿಎಲ್ಗೆ ಚೆನ್ನೈ ಧೋನಿಯನ್ನ ಉಳಿಸಿಕೊಳ್ಳೋದು ಖಚಿತ. ಆದ್ರೆ ಈ ಬಗ್ಗೆ ಧೋನಿ ಹೇಳಿಕೆಯೊಂದು ನೀಡಿದ್ದು, ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಅದು ಧೋನಿ ಚೆನ್ನೈ ಪರ ಆಡ್ತಾರಾ ಇಲ್ವೋ ಅನ್ನೋ ಗೊಂದಲಕ್ಕೆ ಉತ್ತರವೇ ಸಿಗದಂತೆ ಮಾಡಿದೆ.
ನವೆಂಬರ್ 30 ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ಬಿಸಿಸಿಐ, ಫ್ರಾಂಚೈಸಿಗಳಿಗೆ ನೀಡಿರುವಂತಹ ಡೆಡ್ಲೈನ್. ಅದಕ್ಕಾಗಿ ಫ್ರಾಂಚೈಸಿಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ತಿವೆ. ಆದರೆ ಅದಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ನಾಯಕ MS ಧೋನಿ, ಡಿಮ್ಯಾಂಡೊಂದನ್ನ ಮುಂದಿಟ್ಟಿದ್ದಾರೆ. ಅದರಲ್ಲೂ ಧೋನಿ ಮುಂದಿಟ್ಟಿರುವ ಬೇಡಿಕೆ ಕೇಳಿದರೆ ಅದೆಂಥವರನ್ನೇ ಆಗಲಿ ಅಚ್ಚರಿ ಮೂಡಿಸುತ್ತದೆ. ಮಾಹಿಯನ್ನ ಫ್ಯಾನ್ಸ್ ಇಷ್ಟಪಡೋದಕ್ಕೆ, ಇದು ಬೆಸ್ಟ್ ಎಕ್ಸಾಂಪಲ್ ಕೂಡ ಹೌದು.
MS ಧೋನಿ.. ಕ್ರಿಕೆಟ್ನ ಮಿಸ್ಟರ್ ಪರ್ಫೆಕ್ಟ್.. ಅದೆಷ್ಟೋ ಕ್ರಿಕೆಟಿಗರಿಗೆ ಗಾಡ್ ಫಾದರ್. 15ನೇ ಆವೃತ್ತಿಯ IPLಗೆ ಧೋನಿ ರಿಟೈನ್ ಆಗೋದು ಖಚಿತ. ಜೊತೆಗೆ ಫ್ರಾಂಚೈಸಿಯ ಮೊದಲ ಆಯ್ಕೆ ಕೂಡ ಅವರೇ ಆಗಿದ್ದಾರೆ. IPLನ 14 ಆವೃತ್ತಿಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಧೋನಿ, ತಂಡವನ್ನ 9 ಬಾರಿ ಫೈನಲ್ಗೇರಿಸಿದ್ದು, 4 ಬಾರಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ. ಹಾಗಾಗಿ ಇಂತಹ ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ಸಿಎಸ್ಕೆ ತುದಿಗಾಲಲ್ಲಿ ನಿಂತಿದ್ರೆ, ಧೋನಿ ಮಾತ್ರ ನನ್ನ ಬದಲಿಗೆ ಬೇರೆ ಆಟಗಾರರನ್ನ ಮೊದಲು ರಿಟೈನ್ ಮಾಡಿಕೊಳ್ಳಿ ಎಂದು ಹೇಳುವ ಮೂಲಕ, ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ.
ಧೋನಿ ಹೇಳಿರೋದೇನು..?
15ನೇ ಆವೃತ್ತಿಯ ಮೆಗಾ ಹರಾಜಿನಲ್ಲಿ ನನಗೆ ದೊಡ್ಡ ಮೊತ್ತ ನೀಡಿ ರಿಟೈನ್ ಮಾಡಿಕೊಳ್ಳಬೇಡಿ. ಜೊತೆಗೆ ನನ್ನನ್ನೇ ರಿಟೈನ್ನಲ್ಲಿ ಮೊದಲ ಆದ್ಯತೆಯಾಗಿ ಪರಿಗಣಿಸೋದು ಬೇಡ ಎಂದು ಹೇಳಿದ್ದಾರೆ. ನನಗಿಂತ ಅಧಿಕ ಮೊತ್ತಕ್ಕೆ ಬಿಕರಿ ಆಗುವ ಅರ್ಹ ಆಟಗಾರರಿದ್ದು, ನನ್ನ ಬದಲಿಗೆ ಅಂತಹ ಆಟಗಾರರ ಖರೀದಿಸುವಂತೆ ಚೆನ್ನೈ ಮ್ಯಾನೇಜ್ಮೆಂಟ್ಗೆ ಪ್ರಸ್ತಾಪ ಇಟ್ಟಿದ್ದಾರೆ ಕೂಲ್ ಕ್ಯಾಪ್ಟನ್. ಐಪಿಎಲ್ ಮುಗಿದು ಕೆಲ ದಿನಗಳ ಬಳಿಕ ಕೂಡ ಇದೇ ಪ್ರಸ್ತಾಪವನ್ನ ಫ್ರಾಂಚೈಸಿ ಮುಂದಿಟ್ಟಿದ್ದ ಧೋನಿ, ನನ್ನ ಮೇಲೆ ಹಣ ಸುರಿದು ವ್ಯರ್ಥ ಮಾಡಿಕೊಳ್ಳಬೇಡಿ ಎಂದಿದ್ರು.
ಧೋನಿ ಹಿಂದೆ ಸರಿಯುವ ನಿರ್ಧಾರದ ಹಿಂದಿರುವ ಪ್ಲಾನ್ ಏನು?
ರಿಟೈನ್ ಮಾಡಿಕೊಳ್ಳಬೇಡಿ ಎಂಬ ನಿರ್ಧಾರದ ಬಗ್ಗೆ, ಧೋನಿ ಸ್ಪಷ್ಟವಾದ ಪ್ಲಾನ್ ಹಾಕಿಕೊಂಡಿದ್ದಾರೆ. ಆದರೆ ಮೂರು ಆವೃತ್ತಿಗಳನ್ನ ನಿರಂತರವಾಗಿ ಆಡುತ್ತಾರೆ ಎಂಬ ಕ್ಲಾರಿಟಿ ಇಲ್ಲವಾಗಿದೆ. IPL ಆಡಬೇಕೇ ಬೇಡವೇ ಅನ್ನೋದನ್ನ ಆಯಾ ಆವೃತ್ತಿ ಮುಗಿದಾಗಲೇ ಸ್ಪಷ್ಟಪಡಿಸುವ ನಿರ್ಧಾರಕ್ಕೆ ಬಂದಿದ್ದಾರೆ ಧೋನಿ. ಆದ್ದರಿಂದಲೇ ರಿಟೈನ್ ಮಾಡಿಕೊಳ್ಳಬೇಡಿ ಎಂದು ಫ್ರಾಂಚೈಸಿಗೆ ಸೂಚಿಸಿದ್ದಾರೆ.
ಇತ್ತೀಚಿಗೆ ಚೆನ್ನೈನಲ್ಲಿ ನಡೆದ ‘THE CHAMPIONS CALL’ ಕಾರ್ಯಕ್ರಮದಲ್ಲೂ MSD ಇದೇ ರೀತಿಯ ಹೇಳಿಕೆ ನೀಡಿದ್ರು. ನನ್ನ ಕೊನೆಯ ಐಪಿಎಲ್, ಚೆನ್ನೈನಲ್ಲೇ ಆಡುತ್ತೇನೆ. ಅದು ಮುಂದಿನ ವರ್ಷವೇ ಆಗಬಹುದು, ಇಲ್ಲವೇ ಐದು ವರ್ಷಗಳಾಗಬಹುದು ಅಂತ ಹೇಳಿದ್ರು. ಧೋನಿ ನೀಡಿದ ಈ ಶಾಕಿಂಗ್ ಹೇಳಿಕೆಯಿಂದ ಸಿಎಸ್ಕೆ ಫ್ರಾಂಚೈಸಿ ಗೊಂದಲಕ್ಕೆ ಒಳಗಾಗಿದೆ.
ಒಟ್ಟಿನಲ್ಲಿ ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ ಧೋನಿ ಆಡೋದೇನೋ ಕನ್ಫರ್ಮ್ ಎಂದು ಹೇಳಲಾಗ್ತಿದೆ. ಆದರೆ ಐಪಿಎಲ್ಗೆ ಗುಡ್ ಬೈ ಯಾವಾಗ ಹೇಳ್ತಾರೆ ಅನ್ನೋದನ್ನ ಅವರ ಬಾಯಲ್ಲೇ ಕೇಳುವವರೆಗೂ ಸ್ಪಷ್ಟತೆ ಸಿಗೋದಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post