ಪೆರುವಿನ ಮಧ್ಯ ಕರಾವಳಿಯಲ್ಲಿ 800 ವರ್ಷಗಳಷ್ಟು ಹಳೆಯದಾದ ಮಮ್ಮಿ ಪತ್ತೆಯಾಗಿದೆ.
ಲಿಮಾ ನಗರದ ಹೊರವಲಯದಲ್ಲಿ ಮಮ್ಮಿ ಪತ್ತೆಯಾಗಿದ್ದು, ಸಮಾಧಿಯಲ್ಲಿ ಪಿಂಗಾಣಿ, ತರಕಾರಿ ಅವಶೇಷಗಳು ಮತ್ತು ಕಲ್ಲಿನ ಉಪಕರಣಗಳು ಸೇರಿದಂತೆ ಹಲವು ರೀತಿಯ ವಸ್ತುಗಳು ಕಂಡುಬಂದಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಪುರಾತತ್ವ ಶಾಸ್ತ್ರಜ್ಞ ಪೀಟರ್ ವ್ಯಾನ್ ಡೇಲೆನ್ ಲೂನಾ, ಸಿಕ್ಕಿರುವ ಮಮ್ಮಿಯ ಇಡೀ ದೇಹವನ್ನು ಹಗ್ಗದಿಂದ ಕಟ್ಟಲಾಗಿದೆ. ಕೈಗಳಿಂದ ಮುಖ ಮುಚ್ಚಿದ ರೀತಿಯಲ್ಲಿ ಮಮ್ಮಿ ಇರಿಸಲಾಗಿದೆ. ಇನ್ನು ಸ್ಥಳೀಯ ಮಾದರಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಅಂತ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post