ನವದೆಹಲಿ: ಭಾರತಕ್ಕೂ ಒಮಿಕ್ರಾನ್ ಮ್ಯೂಟಂಟ್ ಹಾವಳಿಯ ಆತಂಕದ ಶುರುವಾಗಿದೆ. ಹೀಗಾಗಿ ಕೊರೊನಾ ವ್ಯಾಕ್ಸಿನ್ಗೆ ಸಂಬಂಧಿಸಿದ ಬೂಸ್ಟರ್ ಡೋಸ್ ಮತ್ತು ಅಡಿಷನಲ್ ಡೋಸ್ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ಬೂಸ್ಟರ್ ಡೋಸ್ಗೆ ಸಂಬಂಧಿಸಿ ಹೊಸ ಪಾಲಿಸಿಯನ್ನ ಮುಂದಿನ 10 ರಿಂದ 15 ದಿನಗಳ ಒಳಗೆ ಪ್ರಕಟವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಮಾಹಿತಿ ನೀಡಿರುವ ಎನ್ಟಿಎಜಿಐ (National Technical Advisory Group on Immunisation in India) ಮುಖ್ಯಸ್ಥ ಡಾ.ಎನ್ಕೆ ಅರೋರಾ.. ಬೂಸ್ಟರ್ ಡೋಸ್ ಪಾಲಿಸಿ ತರಲು ಕೇಂದ್ರ ಸರ್ಕಾರ ಚಿಂತನೆ ನಡೆದಿದೆ. ಈ ಬಗ್ಗೆ ತಜ್ಞರು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಪಾಲಿಸಿ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.
ನಾವು ರೆಡಿ ಎಂದ ವ್ಯಾಕ್ಸಿನ್ ಕಂಪನಿಗಳು
ಅಡಿಷನಲ್ ಡೋಸ್ ಮತ್ತು ಬೂಸ್ಟರ್ ಡೋಸ್ ಅಂತಾ ಎರಡು ವಿಭಿನ್ನ ಅಂಶಗಳಿವೆ. ಬೋಸ್ಟರ್ ಡೋಸ್ ಅನ್ನ ನಿರ್ದಿಷ್ಟ ಅವಧಿಯ ನಂತರ ನೀಡುವುದಾಗಿದೆ. ಅಂದರೆ ಓರ್ವ ವ್ಯಕ್ತಿಯು ಪ್ರೈಮರಿ ಶೆಡ್ಯೂಲ್ ಪೂರ್ಣಗೊಳಿಸಿದ ನಂತರ ಈ ಡೋಸ್ ನೀಡಬೇಕು. ಅಡಿಷನಲ್ ಡೋಸ್ ಅನ್ನ ಪ್ರೈಮರಿ ಶೆಡ್ಯೂಲ್ ಬಳಿಕ ಕಳಪೆಯಾಗಿ ರೆಸ್ಪಾಂಡ್ ಮಾಡಿದರೆ ನೀಡಬೇಕಿದೆ. ಈ ಸಂಬಂಧ ಸದ್ಯದಲ್ಲೇ ಪಾಲಿಸಿ ಪ್ರಕಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮ್ಯೂಟೆಂಟ್ ಕೊರೊನಾ ಆತಂಕ ಹಿನ್ನೆಲೆಯಲ್ಲಿ ಬೋಸ್ಟರ್ ಡೋಸ್ಗೆ ಬೇಡಿಕೆ ಹೆಚ್ಚಾಗಿದ್ದು, ದೇಶದಲ್ಲಿ ಯಾಕೆ ಅದನ್ನ ನೀಡುತ್ತಿಲ್ಲ ಅನ್ನೋ ಪ್ರಶ್ನೆಗಳು ಶುರುವಾಗಿವೆ. ಈ ಬಗ್ಗೆ ದೆಹಲಿ ಹೈಕೋರ್ಟ್ ಕೂಡ ಪ್ರಶ್ನೆ ಮಾಡಿದೆ. ಒಂದು ವೇಳೆ ಭಾರತ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ನಾವ್ ವ್ಯಾಕ್ಸಿನ್ ನೀಡಲು ಸಿದ್ಧರಿದ್ದೇವೆ ಎಂದು ಪ್ರೈವೇಟ್ ವ್ಯಾಕ್ಸಿನ್ ಕಂಪನಿಗಳು ತಿಳಿಸಿವೆ. ಹೀಗಾಗಿ ಎಲ್ಲರ ಚಿತ್ರ ಸರ್ಕಾರದ ನಿರ್ಧಾರದತ್ತ ನೆಟ್ಟಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post