ನವದೆಹಲಿ: ತಿರುಮಲದ ವೆಂಕಟೇಶ್ವರ ದೇಗುಲದ ಡಾಲರ್ ಪಿ.ಶೇಷಾದ್ರಿ ಅವರು ನಿಧನರಾಗಿದ್ದಾರೆ. ಡಾಲರ್ ಶೇಷಾದ್ರಿ ಎಂದೇ ಅವರು ಪ್ರಖ್ಯಾತಿ ಹೊಂದಿದ್ದರು.
ಶೇಷಾದ್ರಿ ಅವರಿಗೆ 75 ವರ್ಷಗಳಾಗಿತ್ತು. ನಿನ್ನೆ ರಾತ್ರಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ವತಿಯಿಂದ ವಿಶಾಖಪಟ್ಟಣದಲ್ಲಿ ಆದ್ಯಾತ್ಮಕ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ರಾತ್ರಿ ವೇಳೆ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಡಾಲರ್ ಶೇಷಾದ್ರಿ ಅವರು ಕಳೆದ 50 ವರ್ಷಗಳಿಂದ ವೆಂಕಟೇಶ್ವರ ಸನ್ನಿಧಿಯ ಆಡಳಿತ ಮಂಡಳಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ದೇವಾಲಯದ ಆಚರಣೆಗಳು ಮತ್ತು ಆಡಳಿತದ ಮೇಲೆ ಉತ್ತಮವಾದ ನಿಯಂತ್ರಣ ಹೊಂದಿದ್ದರು. ಅಧಿಕಾರಿ ವರ್ಗದಲ್ಲಿ ಪ್ರಭಾವಿಯಾಗಿದ್ದರು ಅವರಿಗೆ ಗರ್ಭಗುಡಿ ಪ್ರವೇಶ ಇರಲಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post