ನವದೆಹಲಿ: ಭಾರೀ ವಿವಾದಕ್ಕೆ ಕಾರಣವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನ ಲೋಕಸಭೆಯಲ್ಲಿ ವಾಪಸ್ ಪಡೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದಂತೆ ಲೋಕಸಭೆ ಕಲಾಪದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ವಿವಾದಿತ ಮೂರು ಕೃಷಿ ಕಾಯ್ದೆಗಳನ್ನ ವಾಪಸ್ ಪಡೆಯುವ ಸಂಬಂಧ ಬಿಲ್ ಮಂಡಿಸಿದರು. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ-2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020 ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020 ಅನ್ನ ವಾಪಸ್ ಪಡೆಯುತ್ತಿರುವ ಬಗ್ಗೆ ಲೋಕಸಭೆಗೆ ತಿಳಿಸಿ ಮಾತನಾಡಿದರು.
ಈ ವೇಳೆ ವಿಪಕ್ಷಗಳು ತೀವ್ರ ಗದ್ದಲ ಉಂಟುಮಾಡಿದರು. ವಿಪಕ್ಷಗಳ ಗದ್ದಲಗಳ ಮಧ್ಯೆಯೂ ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆಯಲಾಯಿತು. ಇನ್ನು ರಾಜ್ಯಸಭೆಯಲ್ಲೂ ಇಂದು ಮಧ್ಯಾಹ್ನದ ವೇಳೆಗೆ ಈ ಕಾಯ್ದೆಗಳು ವಾಪಸ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ನೂತನ 3 ಕೃಷಿ ಕಾನೂನು ವಾಪಸ್ -ಪ್ರಧಾನಿ ಮೋದಿ ಘೋಷಣೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post