ನವದೆಹಲಿ: ಮಾಜಿ ರಾಜ್ಯಸಭಾ ಸದಸ್ಯ, ಬಿಜೆಪಿ ಹಿರಿಯ ನಾಯಕ ಪ್ರಭಾಕರ್ ಕೋರೆ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನ ಭೇಟಿಯಾಗಿದ್ದಾರೆ.
ಅಮೆರಿಕದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೋರೆ ಅವರು ಟ್ರಂಪ್ ಅವರನ್ನ ಭೇಟಿಯಾಗಿದ್ದಾರೆ. ಉದ್ಯಮಿ, ಶಿಕ್ಷಣತಜ್ಞರಾದ ರವಿಶಂಕರ್ ಭೂಪ್ಲಾಪುರ್ ಅವರು ಇತ್ತೀಚೆಗೆ ತಮ್ಮ ಮಗಳನ್ನ ಮದುವೆ ಮಾಡಿದರು. ಮಗಳಾದ ಮನಲಿ ಅವರು ಅಂಕಿತ್ ಅನ್ನೋರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.
ಈ ಮದುವೆ ಸಮಾರಂಭದಲ್ಲಿ ಪ್ರಭಾಕರ್ ಕೋರೆ ಟ್ರಂಪ್ ಅವರನ್ನ ಭೇಟಿ ಮಾಡಿದ್ದಾರೆ. ಈ ಬಗ್ಗೆ ಕೋರೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
Privileged to meet former US President Donald Trump while attending the wedding of Dr Manali, the daughter of Businessman, Educationist and Philanthropist Ravishankar Bhooplapur, with Ankit in the United States of America. pic.twitter.com/6j5KvsHSmh
— Prabhakar Kore (@prabhakarbkore) November 29, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post