ಸ್ಯಾಡಲ್ವುಡ್ನ ಮೋಸ್ಟ್ ಬ್ಯೂಟಿಫುಲ್ ನಟಿ ಮೋಹಕ ತಾರೆ ರಮ್ಯಾಗೆ ಇಂದು 39 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ”ಅಭಿ” ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ರಮ್ಯಾ ನಂತರ ”ಎಕ್ಸ್ ಕ್ಯೂಸ್ ಮಿ”, ”ರಂಗ ಎಸ್ ಎಸ್ ಎಲ್” ಸಿನಿಮಾಗಳ ಮೂಲಕ ಮೋಹಕ ತಾರೆ ಎನಿಸಿಕೊಂಡ್ರು.
ಇದನ್ನೂ ಓದಿ:‘ಅಪ್ಪು’ರನ್ನು ನಮ್ಮಲ್ಲಿ ಜೀವಂತವಾಗಿಡಲು ಒಂದು ಮಾರ್ಗವಿದೆ- ಅಭಿಮಾನಿಗಳಿಗೆ ರಮ್ಯಾ ಸಂದೇಶ
ಸಿನಿಮಾದಿಂದ ದೂರಾದ ರಮ್ಯ ರಾಜಕೀಯದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ರು. ಇನ್ನು ರಮ್ಯಾ ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ ಅಂದ್ರೆ ಅದು ”ನಾಗರಹಾವು”. ಈ ಚಿತ್ರದ ನಂತರ ಸಾಕಷ್ಟು ಅವಕಾಶಗಳು ರಮ್ಯಾಗೆ ಬಂದಿದ್ರು ರಮ್ಯಾ ನಿರಾಕರಿಸಿದ್ರು.
ಇದನ್ನೂ ಓದಿ:ತಮಿಳು ನಟ ಸೂರ್ಯ ಪರ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಬ್ಯಾಟಿಂಗ್
ಪುನಃ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದ ರಮ್ಯ, ಮತ್ತೆ ನಾನು ಸ್ಯಾಂಡಲ್ವುಡ್ಗೆ ಎಂಟ್ರಿಕೊಡುವುದಾದರೆ ಅದು ”ಅಪ್ಪು” ಜೊತೆ ಮಾತ್ರ ಅಂತ ಹೇಳೀದ್ದರು. ಆದರೆ ರಮ್ಯಾ ಅವರ ಆಸೆ ಅಸೆಯಾಗೇ ಉಳಿಯಿತು. ಸದ್ಯ ರಮ್ಯಾ ಸಿನಿಮಾರಂಗ ಮತ್ತು ರಾಜಕೀಯದಿಂದ ನಿವೃತ್ತಿ ಪಡೆದು ಆರಾಮಾಗಿದ್ದಾರೆ.
ಇದನ್ನೂ ಓದಿ:ಅಪ್ಪು ಜೊತೆ ಜೇಮ್ಸ್ ಮತ್ತು ದ್ವಿತ್ವದಲ್ಲಿ ನಟಿಸಬೇಕಿತ್ತು.. ಆದರೆ- ರಮ್ಯಾ ಹೇಳಿದ್ದೇನು..?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post