ಅವಕಾಶ ಸಿಕ್ಕಿದ್ದೇ ಅದೃಷ್ಟದಲ್ಲಿ.. ಅದು ಕೂಡ ಸಬ್ ಕೀಪರ್ ಆಗಿ.. ಆದ್ರೆ, ಆ ಸಿಕ್ಕ ಅವಕಾಶದಲ್ಲಿ ನೀಡಿರುವ ಪ್ರದರ್ಶನ ಇದೀಗ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದೆ. ಜೊತೆಗೆ ಅದೇ ಅಮೋಘ ಪ್ರದರ್ಶನ ಇಬ್ಬರ ಸ್ಥಾನಕ್ಕೂ ಕುತ್ತು ತಂದಿದೆ. ಜೊತೆಗೆ ಟೆಸ್ಟ್ ತಂಡದಲ್ಲಿ ಈತನಿಗೆ ಅವಕಾಶ ಫಿಕ್ಸ್ ಅನ್ನೋ ಟಾಕ್ ಕೂಡ ಸ್ಟಾರ್ಟ್ ಆಗಿದೆ.
ಇಂಡೋ-ಕಿವೀಸ್ ಮೊದಲ ಟೆಸ್ಟ್ನಲ್ಲಿ ಕ್ರಿಕೆಟ್ ಪಂಡಿತರ ಗಮನವನ್ನ ಹೆಚ್ಚು ಸೆಳೆದಿದ್ದು, ಸಬ್ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತಿರೋ KS ಭರತ್. ಅದೃಷ್ಟದಲ್ಲಿ ಸಿಕ್ಕ ಅವಕಾಶದಲ್ಲಿ ವಿಕೆಟ್ ಹಿಂದೆ ನಿಂತು ಚಾಣಾಕ್ಷ ಕೀಪಿಂಗ್ ಮಾಡಿರೋ ಆಂಧ್ರದ ಭರತ್, ಕ್ರಿಕೆಟ್ ಲೋಕದಲ್ಲಿ ಹೊಸ ಟಾಕ್ಗೆ ಕಾರಣವಾಗಿದ್ದಾರೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವೃದ್ಧಿಮಾನ್ ಸಾಹಗೆ ಕುತ್ತಿಗೆ ನೋವು ಕಾಣಿಸಿಕೊಂಡ ಕಾರಣ, 3ನೇ ದಿನದಾಟದಲ್ಲಿ ಮೈದಾನಕ್ಕೆ ಇಳಿಯಲಿಲ್ಲ. ಪರಿಣಾಮ ಗ್ಲೌಸ್ ತೊಟ್ಟ ಕಣಕ್ಕಿಳಿದ ಭರತ್, ಇಡೀ ವಿಶ್ವ ಗಮನ ಸೆಳೆದಿದ್ದಾರೆ. ಜೊತೆಗೆ 2ನೇ ಟೆಸ್ಟ್ಗೂ ಸ್ಥಾನ ಫಿಕ್ಸ್ ಮಾಡಿಕೊಂಡಿದ್ದಾರೆ.
ಸಾಹಗೆ ಬೆಸ್ಟ್ ರಿಪ್ಲೇಸ್, ಪಂತ್ಗೂ ಟಫ್ ಕಾಂಪಿಟೇಷನ್..!
ಯೆಸ್..! ಸಾಹ ಮತ್ತು ರಿಷಭ್ ಪಂತ್ ಸ್ಥಾನಕ್ಕೆ ಕುತ್ತು ತಂದಿರೋದು ಭರತ್ರ ಚಾಣಾಕ್ಷ ಕೀಪಿಂಗ್. ಸಾಹ ಅನುಭವಿಯಾದ್ರೂ, ಅವರ ವಯಸ್ಸೇ ಮುಂದಿನ ದಿನದಲ್ಲಿ ತಂಡದಿಂದ ದೂರವಿಡುವಂತೆ ಮಾಡ್ತಿದೆ. ಇನ್ನು ಟೆಸ್ಟ್ನಲ್ಲಿ ಅದ್ಭುತ ಬ್ಯಾಟಿಂಗ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ರೂ, ವಿಕೆಟ್ ಕೀಪಿಂಗ್ನಲ್ಲಿ ಪಂತ್ ಹಿನ್ನಡೆ ಅನುಭವಿಸ್ತಿದ್ದಾರೆ. ವಿಕೆಟ್ ಕೀಪಿಂಗ್ ಟೆಕ್ನಿಕ್ನಲ್ಲಿ ಪಂತ್ ವೀಕ್ ಆಗಿದ್ದಾರೆ. ಆದ್ರೆ, ಈ ವಿಚಾರದಲ್ಲಿ ಹೊಸ ಭರವಸೆ ಮುಡಿಸಿರೋ ಭರತ್, ಸಾಹ ಮತ್ತು ಪಂತ್ ಇಬ್ಬರ ಸ್ಥಾನವನ್ನ ಸಬ್ ಕೀಪರ್ ಆಗಿಯೇ ಒಮ್ಮೆಗೆ ಅಲುಗಾಡಿಸಿಬಿಟ್ಟಿದ್ದಾರೆ.
ಕ್ಯಾಚ್, ಸ್ಟಂಪ್, ಕ್ಯಾಚ್.. ಭರತ್ ಬೊಂಬಾಟ್ ವಿಕೆಟ್ ಕೀಪಿಂಗ್..!
ಒಬ್ಬ ಆಟಗಾರನ ಪ್ರದರ್ಶನ ಹೇಗಿದೆ ಅನ್ನೋದನ್ನ ದೀರ್ಘಕಾಲ ಕಾದು ನೋಡಬೇಕಿಲ್ಲ. ಒಂದೇ ಪಂದ್ಯದಲ್ಲಿ ಆತನ ಟೆಕ್ನಿಕ್ಸ್, ಸ್ಕಿಲ್ಸ್, ಆಟದಲ್ಲಿರಬೇಕಾದ ಪ್ರಸೆನ್ಸ್.. ಇವುಗಳನ್ನ ಗಮನಿಸಿದರೆ ಸಾಕು. ಆತ ಹೇಗೆ ಪ್ರದರ್ಶನ ನೀಡ್ತಾನೆ ಅನ್ನೋದು ತಿಳಿದುಬಿಡುತ್ತೆ. ಈ ಎಲ್ಲಾ ಲಕ್ಷಣಗಳಿಗೂ ಭರತ್ ಉದಾಹರಣೆಯಾಗಿ ನಿಂತಿದ್ದಾರೆ. ವಿಲ್ಯಂಗ್ ವಿಕೆಟ್ ಕಬಳಿಸಲು ಭರತ್ ಹಿಡಿದ ಕ್ಯಾಚೇ ಇದಕ್ಕೆ ಸಾಕ್ಷಿಯಾಗಿದೆ.
ಅಶ್ವಿನ್ ಬೌಲಿಂಗ್ನಲ್ಲಿ ವಿಲ್ಯಂಗ್ರ ಬ್ಯಾಟ್ಗೆ ತಾಗಿದ ಚೆಂಡು ನೇರವಾಗಿ ಕೀಪರ್ ಭರತ್ ಕೈ ಸೇರುತ್ತೆ. ಆದರೆ ಅಂಪೈರ್ ಮಾತ್ರ ನಾಟೌಟ್ ತೀರ್ಪು ನೀಡ್ತಾರೆ. ಅದಾದ ಮರುಕ್ಷಣವೇ ಭರತ್, ರಿವಿವ್ಯೂ ತೆಗೆದುಕೊಳ್ಳುವಂತೆ ನಾಯಕ ರಹಾನೆಗೆ ಕೋರ್ತಾರೆ. ತೀರ್ಪು ಮರುಪರಿಶೀಲನೆಯಲ್ಲಿ ಚೆಂಡು ಬ್ಯಾಟ್ ತಾಗಿರೋದು ಕನ್ಫರ್ಮ್ ಆಗುತ್ತೆ. ಆಟದಲ್ಲಿರಬೇಕಾದ ಪ್ರಸೆನ್ಸ್ ಇದೇ ಬೆಸ್ಟ್ ಎಕ್ಸಾಂಪಲ್. ಇಷ್ಟೇ ಅಲ್ಲ.. ಇನ್ನ ಸಖತ್ ಟಫ್ ಆಗಿದ್ದ ರಾಸ್ ಟೇಲರ್ ಕ್ಯಾಚ್, ಟಾಮ್ ಲಾಥಮ್ ಸ್ಟಂಪಿಂಗ್ ಕೂಡ ಭರತ್ರ ಟೆಕ್ನಿಕ್ಸ್ & ಸ್ಕಿಲ್ಸ್ಗೆ ಸಾಕ್ಷಿಯಾಗಿವೆ. ಆದ್ರೆ, ಪಂತ್ DRS ಹಾಗೂ ಕೀಪಿಂಗ್ ಸ್ಕಿಲ್ ವಿಚಾರದಲ್ಲಿ ಹಿಂದುಳಿದಿರೋದು ಪದೇ ಪದೇ ಪ್ರೂವ್ ಆಗಿದೆ.
ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲೂ ಬ್ಯಾಟಿಂಗ್, ಕೀಪಿಂಗ್ನಲ್ಲಿ ಮೋಡಿ..!
ಸಬ್ ಫೀಲ್ಡರ್ ಮೋಡಿ ಮಾಡಿರುವ ಭರತ್, ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲೂ ಜಾದೂ ಮಾಡಿದ್ದಾರೆ. ಪ್ರಥಮ ದರ್ಜೆಯಲ್ಲಿ 270 ಕ್ಯಾಚ್, 31 ಸ್ಟಂಪ್, ಲೀಸ್ಟ್ ಎ ಕ್ರಿಕೆಟ್ನಲ್ಲಿ 54 ಕ್ಯಾಚ್, 11 ಸ್ಟಂಪ್ ಮಾಡಿದ ಸಾಧನೆ ಭರತ್ಗಿದೆ. ಜೊತೆಗೆ ಬ್ಯಾಟಿಂಗ್ನಲ್ಲೂ ಮೋಡಿ ಮಾಡಿದ್ದಾರೆ. ಹೀಗಾಗಿ ಆಯ್ಕೆಗಾರರ ಗಮನ ಸೆಳೆದಿರೋ ಭರತ್, ಪಂತ್ಗೆ ಕಾಂಪಿಟೇಟರ್ ಆಗಿದರ ಜೊತೆಗೆ, ಸಾಹಗೆ ಶಾಶ್ವತವಾಗಿ ಟೆಸ್ಟ್ ತಂಡದಿಂದ ಮುಕ್ತಿ ನೀಡಲು ಸಿದ್ಧರಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post