ಡಿವೋರ್ಸ್ ಆದ ನಂತರ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದ ಸಮಂತಾ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋಯಿನ್ ಆಗಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ಸಮಂತಾ, ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿರೋದನ್ನು ನಾವೆ ನಿಮಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಅದೇನಂದ್ರೆ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿರೋದು.
ಸಮಂತಾ ಸಿನಿ ಕೆರಿಯರ್ನಲ್ಲಿ ಇದು ಮೊದಲ ಐಟಂ ಸಾಂಗ್. ಹಾಗಾಗಿ ಈ ಹಾಡಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಫ್ಯಾನ್ಸ್. ಯಾಕಂದ್ರೆ ಅಲ್ಲು ಅರ್ಜುನ್ ಜೊತೆ ಸ್ಟೆಪ್ ಹಾಕೋದು ಅಂದ್ರೆ ಅಷ್ಟು ಸುಲುಭದ ಮಾತಲ್ಲ. ಸಾಮಾನ್ಯವಾಗಿ ಅಲ್ಲು ಅರ್ಜುನ್ ಸಿನಿಮಾಗಳಿಗೆ ಟಾಲಿವುಡ್ ಸ್ಟಾರ್ ಕೊರಿಯೋಗ್ರಾಫರ್ಗಳಾದ, ಜಾನಿ ಮಾಸ್ಟರ್ ಆಥವಾ ಶೇಖರ್ ಮಾಸ್ಟರ್ ನೃತ್ಯ ಸಂಯೋಜಿಸುತ್ತಾರೆ.

ಆದರೆ ಈ ಬಾರಿ ‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್ ಅಲ್ಲು ಅರ್ಜುನ್ ಗೆ ಡ್ಯಾನ್ಸ್ ಹೇಳಿಕೊಡಲು ಬಾಲಿವುಡ್ ಕೊರಿಯೋಗ್ರಾಫರ್ಗೆ ಚಾನ್ಸ್ ನೀಡಿದ್ದಾರೆ. ಬಾಲಿವುಡ್ನ ಖ್ಯಾತ ಡ್ಯಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ, ಈ ಬಾರಿ ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಲಿದ್ದಾರೆ. ಅಲ್ಲು ಅರ್ಜುನ್ಗೆ ಗಣೇಶ್ ಆಚಾರ್ಯ ಕೊರಿಯೋಗ್ರಾಫ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ‘ಡಿ ಜೆ’ ಸಿನಿಮಾದ ‘ಬಡಿಲೋ ಗುಡಿಲೋ’ ಅನ್ನೋ ಸಾಂಗ್ ಕೊರಿಯೋಗ್ರಾಫ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಮತ್ತೆ ಈ ಜೋಡಿ ಒಂದಾಗಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ‘ಪುಷ್ಪ’ ಸಿನಿಮಾ ಐಟಂ ಸಾಂಗ್ಗಾಗಿ ಸಮಂತಾ 5 ದಿನಗಳ ಕಾಲ್ ಶೀಟ್ ನೀಡಿದ್ದು ಆದಷ್ಟು ಬೇಗ ಸಾಂಗ್ ಶೂಟ್ ಆಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post