ರಾಜಮೌಳಿ ಸಿನಿಮಾಗಳೆಂದರೆ ಅಲ್ಲಿ ಸಾಕಷ್ಟು ಕಲಾವಿದರ ದಂಡೇ ಇರುತ್ತದೆ. ರಾಜಮೌಳಿ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿರುವುದರಿಂದ ಆಯಾ ಭಾಷೆಗೆ ಸಂಬಂಧ ಪಟ್ಟ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವುದು ರಾಜಮೌಳಿಯ ಬ್ಯುಸಿನೆಸ್ ತಂತ್ರದ ಒಂದು ಭಾಗ.
ಈ ಹಿಂದೆ ರಾಜಮೌಳಿ ”ಈಗ” ಸಿನಿಮಾದಲ್ಲಿ ಸುದೀಪ್ ಸ್ಟಾರ್ ವಿಲನ್ ಆಗಿ ಮಿಂಚಿದ್ದಲ್ಲದೆ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಲಾಂಚ್ ಕೂಡ ಆಗಿದ್ದರು. ನಂತರ ರಾಜಮೌಳಿಯ ‘ಬಾಹುಬಲಿ-1’ ಲ್ಲಿ ಕೂಡ ಸುದೀಪ್ ಇದ್ದು, ಅಸ್ಲಾಂ ಖಾನ್ ಪಾತ್ರದಲ್ಲಿ ಮತ್ತೊಮ್ಮೆ ತಮ್ಮ ನಟನೆಯನ್ನು ಪ್ರೂ ಮಾಡಿದ್ದರು. ಆದರೆ ”ಬಾಹುಬಲಿ-2” ರಲ್ಲಿ ಸುದೀಪ್ ಇರುತ್ತಾರೆ ಎಂದು ಸಾಕಷ್ಟು ಮಂದಿ ಊಹಿಸಿದ್ದರು. ಆದರೆ ಸುದೀಪ್ ಇರಲಿಲ್ಲ. ನಂತರ ಸೆಟ್ಟೇರಿದ ‘ಆರ್ ಆರ್ ಆರ್’ ಸಿನಿಮಾದಲ್ಲಿ ರಾಮ್ ಚರಣ್, ಜ್ಯೂ. ಎನ್ ಟಿ ಆರ್, ಅಜಯ್ ದೇವಗನ್, ಆಲಿಯಾ ಭಟ್, ಶ್ರೀಯಾ ಶರಣ್, ಹೀಗೆ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರ ದಂಡೇ ಇದೆ. ಆದರೆ ಕನ್ನಡದ ಯಾವ ಸ್ಟಾರ್ ನಟರು ಇಲ್ಲದೆ ಇರುವುದು ಕೊಂಚ ಬೇಸರ ಉಂಟು ಮಾಡಿತ್ತು.
ಇದನ್ನೂ ಓದಿ:‘ಥ್ರಿಬಲ್ ಆರ್’ನಲ್ಲಿ ಐಟಂ ಸಾಂಗ್? ರಾಜಮೌಳಿಗೆ ಫ್ಯಾನ್ಸ್ ಕೇಳ್ತಿರೋ ಪ್ರಶ್ನೆಯೇನು ಗೊತ್ತಾ?
ಆದರೆ ಈಗ ಸಿಕ್ಕಿರೋ ಮಾಹಿತಿ ಪ್ರಕಾರ ”ಥ್ರಿಬಲ್ ಆರ್” ನಲ್ಲಿ ಕನ್ನಡದ ಸ್ಟಾರ್ ನಟರಿಲ್ಲದಿದ್ದರು, ಪ್ರತಿಭಾವಂತ ನಟ ಅರುಣ್ ಸಾಗರ್ ‘ಥ್ರಿಬಲ್ ಆರ್’ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದ ಪ್ರಾರಂಭದಲ್ಲೇ ಕಾಣಿಸಿಕೊಳ್ಳುವ ಅರುಣ್ ಸಾಗರ್, ಪಾತ್ರ ತುಂಬಾ ಚಿಕ್ಕದಾದರೂ, ಬಹಳ ಮುಖ್ಯ ಪಾತ್ರವಂತೆ. ಈ ವಿಚಾರದ ಬಗ್ಗೆ ರಾಜಮೌಳಿ ಎಲ್ಲು ಹೇಳದೆ ಇದ್ರೂ, ಮುಂದಿನ ದಿನಗಳಲ್ಲಿ ಸತ್ಯ ಹೊರ ಬೀಳಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post