ಬೆಂಗಳೂರು: ಹೆಮ್ಮಾರಿ ಕೊರೊನಾ ಅಟ್ಟಹಾಸಕ್ಕೆ ಇಡೀ ಜಗತ್ತೇ ಸಂಕಷ್ಟದಲ್ಲಿ ಮಿಂದೆದ್ದಿದೆ. ಅದೆಷ್ಟೋ ರಾಷ್ಟ್ರಗಳು ಈಗಷ್ಟೇ ಚೇತರಿಸಿಕೊಳ್ತಿವೆ. ಹೀಗಿರುವಾಗಲೇ ರೂಪ ಬದಲಿಸಿಕೊಂಡು ಮತ್ತೆ ಹೆಮ್ಮಾರಿ ಕರಾಳತೆಯನ್ನು ತೋರಲು ಆರಂಭಿಸಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿಗೂ ಆತಂಕ ಶುರುವಾಗಿದೆ. ಈ ನಡುವೆ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ 10ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವ ಘಟನೆ ಕೋರಮಂಗಲದ ರಹೇಜ ರೆಸಿಡೆನ್ಸಿ ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ನಡೆದಿದೆ.
ಬಿಬಿಎಂಪಿ ಸದ್ಯ ಅಪಾರ್ಟ್ಮೆಂಟ್ ನ ಫ್ಲಾಟ್ ಅನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದು, ಎಲ್ಲರ ಸ್ಯಾಂಪಲ್ ಗಳನ್ನ ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಿಕೊಟ್ಟಿದೆ.
ಕೆಲ ದಿನಗಳ ಹಿಂದೆಯಷ್ಟೇ ಅಪಾರ್ಟ್ಮೆಂಟ್ ನ ಫ್ಲಾಟ್ನಲ್ಲಿ ಬರ್ತ್ಡೇ ಪಾರ್ಟಿ ನಡೆಸಲಾಗಿತ್ತು. ಪಾರ್ಟಿಯಲ್ಲಿ 16ಕ್ಕೂ ಹೆಚ್ಚು ಮಂದಿ ಸೇರಿದ್ದರು. ಇದರಲ್ಲಿ 10 ಮಂದಿಯ ವರದಿ ಪಾಸಿಟವ್ ಬಂದಿದೆ. ಸದ್ಯ ಅಪಾರ್ಟ್‌ಮೆಂಟ್ ಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬರ್ತ್ ಡೇ ಪಾರ್ಟಿ ಗೆ ಬಂದಿರುವ ಎಲ್ಲಾ ಜನರ ಸ್ವಾಬ್ ಅನ್ನು ಸ್ವೀಕರಿಸಿದ್ದಾರೆ. ಅಲ್ಲದೇ ಅಪಾರ್ಟ್ಮೆಂಟ್ ನ ಫ್ಲಾಟ್ ಜೊತೆಗೆ ಬರ್ತ್ಡೇ ಪಾರ್ಟಿಗೆ ಬಂದಿರುವ ಸಂಬಂಧಿಕರ ಮನೆಗಳನ್ನೂ ಕಂಟೈನ್ಮೆಂಟ್ ಜೋನ್ ಎಂದು ಗುರುತು ಮಾಡಿ, ಎಲ್ಲರ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post