ಭಾರತ- ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ, ರೋಚಕ ಡ್ರಾನಲ್ಲಿ ಅಂತ್ಯ ಕಂಡಿದೆ. ಕುತೂಹಲಕಾರಿ ಘಟ್ಟ ತಲುಪಿದ್ದ ಪಂದ್ಯದ ಅಂತಿಮ ದಿನದಾಟ ಹೇಗಿತ್ತು.? ಇಲ್ಲದೆ ಕಂಪ್ಲೀಟ್ ರಿಪೋರ್ಟ್.
5ನೇ ದಿನದಾಟದ ಆರಂಭದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದ್ರೂ, ಅಂತಿಮ ಸೆಷನ್ ವೇಳೆಗೆ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಪರಿಣಾಮ ನಿನ್ನೆಯ ದಿನದಾಟದ ಅಂತಿಮ ಓವರ್ಗಳು, ಅಭಿಮಾನಿಗಳ ಕುತೂಹಲವನ್ನ ಹೆಚ್ಚಿಸಿದ್ವು. ಭಾರತ – ನ್ಯೂಜಿಲೆಂಡ್ ನಡುವಿನ ಕಾದಾಟದಲ್ಲಿ ಮಂದ ಬೆಳಕಿನ ಪರಿಣಾಮ, ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.
4ನೇ ದಿನದಾಟದ ಅಂತ್ಯದ ವೇಳೆಗೆ ಕಿವೀಸ್ನ ಪ್ರಮುಖ ವಿಕೆಟ್ ಕಬಳಿಸಿದ್ದ ಭಾರತ, ಗೆಲುವಿನ ಉತ್ಸಾಹದಲ್ಲಿತ್ತು. ಅದೇ ವಿಶ್ವಾಸದಲ್ಲಿ 5ನೇ ದಿನದಾಟದಲ್ಲಿ ರಹಾನೆ ಪಡೆ ಕಣಕ್ಕಿಳಿದಿತ್ತು. ಆದ್ರೆ, ಆ ಎಲ್ಲಾ ಲೆಕ್ಕಾಚಾರವನ್ನ ಕಿವೀಸ್ ಪಾಳೆಯದ ಬ್ಯಾಟರ್ಸ್ ತಲೆ ಕೆಳಗಾಗಿಸಿದ್ರು.
ಟೀಮ್ ಇಂಡಿಯಾ ಎಡವಿದ್ದೆಲ್ಲಿ?
ಟಾಮ್ ಲಾಥಮ್, ಸೋಮರ್ವಿಲ್ಲಿ ಜೋಡಿ 194 ಎಸೆತ ಎದುರಿಸಿ, 76 ರನ್ಗಳಿಸಿದ್ದಲ್ಲದೇ, ದಿನದಾಟದ ಮೊದಲ ಸೆಷನ್ನಲ್ಲಿ ವಿಕೆಟ್ ಬಿಟ್ಟು ಕೊಡಲೇ ಇಲ್ಲ. ಬಳಿಕ 3ನೇ ವಿಕೆಟ್ಗೆ ಜೊತೆಯಾದ ಲಾಥಮ್ – ವಿಲಿಯಮ್ಸನ್, 116 ಎಸೆತಗಳವರೆಗೆ ಕ್ರಿಸ್ನಲ್ಲಿದ್ದು 39 ರನ್ಗಳಿಸಿದ್ರು. 7ನೇ ವಿಕೆಟ್ಗೆ ಬ್ಲಂಡಲ್, ರಚಿನ್ ರವಿಂದ್ರ 55 ಬಾಲ್ಗಳನ್ನ ಸಮರ್ಥವಾಗಿ ಎದುರಿಸಿದ್ರು. ಜೊತೆಗೆ ಟಿಮ್ ಸೌಥಿ, ಕೈಲ್ ಜೆಮಿಸನ್ ವಿಕೆಟ್ ಅನ್ನ, ಬೇಗನೇ ಕಬಳಿಸುವಲ್ಲಿ ಭಾರತ ವಿಫಲವಾಯ್ತು. ಕೊನೆಗೆ ರಚಿನ್ ರವಿಂದ್ರ – ಏಜಾಜ್ ಪಟೇಲ್ ನಡುವಿನ ಅಂತಿಮ ವಿಕೆಟ್ ಜೊತೆಯಾಟವನ್ನ ಮುರಿಯಲು ವಿಫಲವಾದ ಭಾರತ, ಡ್ರಾಗೆ ತೃಪ್ತಿಪಟ್ಟುಕೊಳ್ಳಬೇಕಾಯ್ತು.
ಗೆಲುವಿನ ಅವಕಾಶವಿದ್ರೂ ಟೀಮ್ ಇಂಡಿಯಾ ಡ್ರಾಗೆ ತೃಪ್ತಿ ಪಟ್ಟುಕೊಳ್ಳಲು, ನ್ಯೂಜಿಲೆಂಡ್ನ ಪಾರ್ಟ್ನರ್ಶಿಪ್ಗಳ ಬೇಗನೇ ಬ್ರೇಕ್ ಮಾಡುವಲ್ಲಿ ವಿಫಲವಾಗಿದ್ದೇ ಕಾರಣ. ಪ್ರತಿ ವಿಕೆಟ್ ಪತನವಾದಾಗಲೂ ಕಣಕ್ಕಿಳಿಯುತ್ತಿದ್ದ ಕಿವೀಸ್ ಬ್ಯಾಟರ್ಸ್, ಕ್ರಿಸ್ನಲ್ಲಿ ಹೆಚ್ಚು ಟೈಮ್ ಸ್ಪೆಂಡ್ ಮಾಡ್ತಿದ್ರು. ಸ್ಕೋರ್ಗಳಿಸದಿದ್ರೂ, ಮ್ಯಾಚ್ ಸೇವಿಂಗ್ ಇನ್ನಿಂಗ್ಸ್ ಕಟ್ಟಬೇಕು ಅನ್ನೋ ಉದ್ದೇಶ ಅವರಲ್ಲಿ ಸ್ಪಷ್ಟವಾಗಿತ್ತು. ಈ ಸಂದರ್ಭವನ್ನ ಅರ್ಥ ಮಾಡಿಕೊಳ್ಳುವಲ್ಲಿ ಟೀಮ್ ಇಂಡಿಯಾ ಎಡವಿದ್ದೇ, ಡ್ರಾಗೆ ತೃಪ್ತಿ ಪಟ್ಟುಕೊಳ್ಳುವಂತೆ ಮಾಡಿತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post