ಹೈದರಾಬಾದ್: ತೆಲುಗು ಸಿನಿಮಾ ರಂಗದ ಖ್ಯಾತ ಗೀತ ರಚನೆಕಾರ, ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ (66) ಅವರು ಇಂದು ನಿಧನರಾಗಿದ್ದು, ಖ್ಯಾತ ಕೊರಿಯೋಗ್ರಾಫರ್, ಹಿರಿಯ ನಟ ಶಿವಶಂಕರ್ ಮಾಸ್ಟರ್ ನಿಧನ ಬೆನ್ನಲ್ಲೇ ಟಾಲಿವುಡ್ ಸಿನಿಮಾ ರಂಗಕ್ಕೆ ಮತ್ತೊಂದು ಅಘಾತ ಎದುರಾಗಿದೆ.
ಇದನ್ನೂ ಓದಿ: ಸೋನು ಸೂದ್ ಸಹಾಯ ಮಾಡಿದ್ರು ಉಳಿಯಲಿಲ್ಲ ಜೀವ; ಕೊನೆಯುಸಿರೆಳೆದ ತೆಲುಗು ಹಿರಿಯ ನಟ
ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ. ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್ ಅವರ ‘ಸಿರಿವೆನ್ನೆಲ’ ಸಿನಿಮಾಗೆ ಗೀತ ರಚನೆ ಮಾಡುವ ಮೂಲಕ ಸಿನಿ ಪಯಣ ಆರಂಭಿಸಿದ ಅವರಿಗೆ ಸಿನಿಮಾ ಟೈಟಲ್ ಮನೆ ಹೆಸರಾಗಿ ಉಳಿದುಕೊಂಡಿತ್ತು. ಇದುವರೆಗೂ 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ 3 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಅವರು ಬರೆದಿದ್ದು, ಸಿನಿಮಾ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಗುರುತಿಸಿದ್ದ ಸರ್ಕಾರ 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇನ್ನು ಆಂಧ್ರ ಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿಯನ್ನು 11 ಬಾರಿ ಸ್ವೀಕರಿಸಿದ ಹೆಗ್ಗಳಿಕೆ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅವರಿಗೆ ದಕ್ಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post